ಕೆಕೆಆರ್ ಗೆಲುವಿನ ನಂತರ ನಗ್ನಳಾದ ಪೂನಮ್ ಪಾಂಡೆ

7

ಕೆಕೆಆರ್ ಗೆಲುವಿನ ನಂತರ ನಗ್ನಳಾದ ಪೂನಮ್ ಪಾಂಡೆ

Published:
Updated:

ನವದೆಹಲಿ (ಪಿಟಿಐ): ಭಾರತ ತಂಡವು ವಿಶ್ವಕಪ್ ಗೆದ್ದರೆ ನಗ್ನಳಾಗುತ್ತೇನೆಂದು ಹೇಳಿ ಮರೆಯಾಗಿ ಹೋಗಿದ್ದ ರೂಪದರ್ಶಿ ಪೂನಮ್ ಪಾಂಡೆ ಮತ್ತೆ ಸುದ್ದಿ ಮಾಡಿದ್ದಾರೆ. ಆದರೆ ಈಗ ಗ್ಲಾಮರ್ ಲೋಕದ ಈ ಬೆಡಗಿ ಬಟ್ಟೆ ಕಳಚಿದ್ದು ಕೋಲ್ಕತ್ತ ನೈಟ್ ರೈಡರ್ಸ್   (ಕೆಕೆಆರ್) ಗೆಲುವಿನ ಸಂತಸದಲ್ಲಿ!ಆದರೆ ಈಗ ನಗ್ನವಾಗಿ ಕಾಣಿಸಿಕೊಂಡಿದ್ದು `ಟ್ವಿಟರ್~ನ ಘೋಷಣಾ ಗೋಡೆಯ ಮೇಲೆ ಅಂಟಿಸಿರುವ ಚಿತ್ರದಲ್ಲಿ ಮಾತ್ರ. ಶಾರೂಖ್ ಖಾನ್ ಒಡೆತನದ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಗೆದ್ದರೆ ನಗ್ನಳಾಗುತ್ತೇನೆ ಎಂದು ತನ್ನ ಅಭಿಮಾನಿಗಳಿಗೆ ಭರವಸೆ ನೀಡಿದ್ದ ಪೂನಮ್ `ನಾನು ಭರವಸೆ ನೀಡಿದಂತೆ ಮಾಡಿದ್ದೇನೆ~ ಎಂದು ಸಂದೇಶ ಬರೆದು ಜೊತೆಗೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.`ಇದು 18 ವರ್ಷ ಮೇಲ್ಪಟ್ಟವರಿಗೆ ಮಾತ್ರ. ಅದಕ್ಕಿಂತ ಕಡಿಮೆ ವಯಸ್ಸಿನವರು ನೋಡಿದರೆ ಅದಕ್ಕೆ ನಾನು ಜವಾಬ್ದಾರಳಲ್ಲ~ ಎಂದು ಕೂಡ ಹೇಳಿಕೊಂಡಿದ್ದಾಳೆ ಈ ಮಾಡೆಲ್. ಇದಕ್ಕೆ ಭಾರಿ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. `ಪೂನಮ್ ಎಫೆಕ್ಟ್; ಮೊದಲು ವಿಶ್ವಕಪ್, ಈಗ ಕೆಕೆಆರ್ ಗೆಲುವು~ ಎಂದು ವ್ಯಕ್ತಿಯೊಬ್ಬ ಪ್ರತಿಕ್ರಿಯೆ ಬರೆದಿದ್ದಾನೆ.`ಐಪಿಎಲ್ ಗೆದ್ದಿದ್ದು ಯಾರೆಂದು ಊಹಿಸಿ? ಅದು ಪೂನಮ್ ಪಾಂಡೆ ಅಭಿಮಾನಿಗಳು~ ಎನ್ನುವ ಇನ್ನೊಂದು ಸಂದೇಶವೂ ಗಮನ ಸೆಳೆದಿದೆ. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ `ಈ ಚಿತ್ರ ಟ್ರೇಲರ್ ಮಾತ್ರ, ನನ್ನ ಮೊದಲ ಚಿತ್ರದಲ್ಲಿ ಇದಕ್ಕಿಂತ ಅದ್ಭುತವಾದದ್ದನ್ನು ಕಾಣಲಿದ್ದೀರಿ. ಸ್ವಲ್ಪ ಸಮಯ ಕಾಯುತ್ತಿರಿ...!~ ಎಂದಿದ್ದಾರೆ ಪೂನಮ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry