ಕೆ.ಜಿಗೆ ರೂ 100 ದಾಟಿದ ಶೇಂಗಾ ಎಣ್ಣೆ!

7

ಕೆ.ಜಿಗೆ ರೂ 100 ದಾಟಿದ ಶೇಂಗಾ ಎಣ್ಣೆ!

Published:
Updated:

ಹುಬ್ಬಳ್ಳಿ: ರಾಜ್ಯದಲ್ಲಿ ಶೇಂಗಾ ಎಣ್ಣೆ ಸದ್ದಿಲ್ಲದೆ `ಸೆಂಚುರಿ~ ಬಾರಿಸಿದೆ. ಹೌದು, ಕೆ.ಜಿ ಶೇಂಗಾ ಎಣ್ಣೆ ಬೆಲೆ ನೂರರ ಗಡಿ ದಾಟಿದ್ದು, ಇದೀಗ ರೂ 108ಕ್ಕೆ ಬಂದು ನಿಂತಿದೆ.ಕಳೆದ ಏಳು ತಿಂಗಳಿಂದ ಒಂದೇ ಸಮನೆ ಗಗನಮುಖಿಯಾಗಿ ಓಡುತ್ತಿರುವ ಎಣ್ಣೆ ದರ, ಇದೇ ಮೊದಲ ಸಲ ಕೆ.ಜಿ.ಗೆ ನೂರರ ಹೊಸ್ತಿಲನ್ನು ದಾಟಿ ಮುನ್ನಡೆದಿದೆ. ಶೇಂಗಾ ಇಳುವರಿ ಪ್ರಮಾಣದಲ್ಲಿ ಕಡಿಮೆ ಆಗಿರುವುದೇ ಈ ಪ್ರಮಾಣದ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನುವುದು ಕರ್ನಾಟಕ ಎಣ್ಣೆ ಬೆಳೆಗಾರರ ಒಕ್ಕೂಟದ (ಕೆಒಎಫ್) ಪ್ರಾದೇಶಿಕ ಅಧಿಕಾರಿಗಳ ವಿವರಣೆ.ವಿವಿಧ ಕಡೆಗಿನ ಕೆಒಎಫ್ ಮಾನ್ಯತೆ ಪಡೆದ ಘಟಕಗಳಲ್ಲಿ ತಯಾರಾಗಿ ಬರುವ ಶೇಂಗಾ ಎಣ್ಣೆಯನ್ನು ಹುಬ್ಬಳ್ಳಿಯ ತಾಜ್‌ನಗರ ಘಟಕದಲ್ಲಿ ಪ್ಯಾಕ್ ಮಾಡಲಾಗುತ್ತದೆ. ಎಣ್ಣೆ ಗುಣಮಟ್ಟ ಸರಿಯಿಲ್ಲದಿದ್ದರೆ ಅದನ್ನು ವಾಪಸು ಕಳುಹಿಸಲಾಗುತ್ತದೆ.ಜನವರಿ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಎಣ್ಣೆ ಉತ್ಪಾದನೆ ಆಗಿಲ್ಲ. ಬಂದ ಎಣ್ಣೆಯಲ್ಲಿ ಗುಣಮಟ್ಟ ಇಲ್ಲದ್ದರಿಂದ ಕೆಲವು ಟ್ಯಾಂಕರ್‌ಗಳು ವಾಪಸು ಹೋಗಿವೆ. ಆದ್ದರಿಂದ ಮಾರುಕಟ್ಟೆಯಲ್ಲಿ ಕೆಒಎಫ್ ಉತ್ಪಾದನೆಯಾದ `ಸಫಲ್~ ಬ್ರಾಂಡ್ ಎಣ್ಣೆ ಸಿಗುವುದು ದುಸ್ತರವಾಗಿದೆ.ಕಳೆದ 20 ದಿನಗಳಲ್ಲಿ ಕೇವಲ ಎರಡು ಟ್ಯಾಂಕ್ ಎಣ್ಣೆ ಮಾತ್ರ ಆವಕವಾಗಿದ್ದು, ತಾಜ್‌ನಗರದ ಘಟಕದಲ್ಲೇ ಮಾರಾಟ ಮಾಡಲು ಸಾಕಾಗುತ್ತಿಲ್ಲ. ಹೀಗಾಗಿ ಹೊರಗಡೆ ಕಳುಹಿಸುವುದು ಸಾಧ್ಯವಾಗಿಲ್ಲ ಎಂದು ಇಲ್ಲಿಯ ಮಾರಾಟ ವಿಭಾಗದ ಸಿಬ್ಬಂದಿ ಹೇಳುತ್ತಾರೆ.ಪರಿಶುದ್ಧವಾದ ಮತ್ತು ಆಹ್ಲಾದಕರ ಪರಿಮಳ ಹೊಂದಿದ ಸಫಲ್ ಎಣ್ಣೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಒಕ್ಕೂಟಕ್ಕೆ ಆಗುತ್ತಿಲ್ಲ.`ತಾಜಾ ಶೇಂಗಾ ಬೀಜಗಳನ್ನು ಬಳಸಿಕೊಂಡು ನಿರ್ಮಲವಾದ ಪರಿಸರದಲ್ಲಿ ಎಣ್ಣೆ ತೆಗೆಯಲಾಗುತ್ತದೆ. ಆದ್ದರಿಂದಲೇ ಸಫಲ್ ಎಣ್ಣೆ ಬಂಗಾರದ ಬಣ್ಣದಿಂದ ಹೊಳೆಯುತ್ತದೆ. ಪರಿಶುದ್ಧವಾದ ಎಣ್ಣೆ ಎಂಬುದಕ್ಕೆ ಅದೇ ಪುರಾವೆ~ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ.ಮೂರು ತಿಂಗಳ ಹಿಂದೆ ಕೆ.ಜಿಗೆ ರೂ 80ರಷ್ಟಿದ್ದ ಎಣ್ಣೆ ಬೆಲೆ ಪ್ರತಿ ತಿಂಗಳೂ ರೂ 10 ಗಳಷ್ಟು  ಏರಿ  ಈಗ ಈ ಹಂತ ತಲುಪಿದೆ. `ಸಫಲ್~ ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಬ್ರ್ಯಾಂಡ್‌ಗಳ ಶೇಂಗಾ ಎಣ್ಣೆ ದರವೂ ಗಣನೀಯವಾಗಿ ಹೆಚ್ಚಿದೆ. ಚನ್ನಬಸವೇಶ್ವರ ಬ್ರಾಂಡ್ ಎಣ್ಣೆಗೆ ಸಗಟು ದರವೇ ಕೆ.ಜಿಗೆ  ರೂ94 ಇದೆ. ಲಕ್ಷ್ಮಿ ಹಾವೇರಿ ಹಾಗೂ ವಿಜಯಾ ಬ್ರ್ಯಾಂಡ್‌ಗಳ ಬೆಲೆಯಲ್ಲೂ ತೀವ್ರ ಹೆಚ್ಚಳವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry