ಗುರುವಾರ , ನವೆಂಬರ್ 21, 2019
27 °C

ಕೆಜೆಪಿಗೆ ಕೊನೆಯ ಚುನಾವಣೆ: ಡಿವಿಎಸ್ ಲೇವಡಿ

Published:
Updated:

ಮಂಗಳೂರು:  `ಸ್ಥಳೀಯ ಸಂಸ್ಥೆ ಚುನಾವಣೆ ಕೆಜೆಪಿಗೆ ಮೊದಲ ಚುನಾವಣೆಯಾಗಿತ್ತು. ವಿಧಾನಸಭೆ ಚುನಾವಣೆ ಆ ಪಕ್ಷಕ್ಕೆ ಕೊನೆಯ ಚುನಾವಣೆಯಾಗಲಿದೆ' ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ವ್ಯಂಗ್ಯವಾಡಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಸದಾನಂದ ಗೌಡ, ಕೆಜೆಪಿ ಮತ್ತು ಅದರ ಅಧ್ಯಕ್ಷ ಯಡಿಯೂರಪ್ಪ ವಿರುದ್ಧ ಟೀಕಿಸಿದರು.`ಯಡಿಯೂರಪ್ಪ ಅವರು ಪಕ್ಷದಲ್ಲಿದ್ದರೆ ನಮಗೂ ತೊಂದರೆಯಾಗುತ್ತಿತ್ತು. ಅವರ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಕಳಂಕ ನಮಗೂ ಅಂಟಿಕೊಳ್ಳುತ್ತಿತ್ತು. ಹೋಗುವಾಗ ಅದನ್ನೂ ತೆಗೆದುಕೊಂಡು ಹೋಗಿದ್ದಾರೆ' ಎಂದರು.ರಾಘವೇಂದ್ರ ವಿರುದ್ಧ ಕ್ರಮ: ಯಡಿಯೂರಪ್ಪ ಅವರ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಾವು ಪಕ್ಷದ ಸಂಸದೀಯ ಮಂಡಳಿಗೆ ಶಿಫಾರಸು ಮಾಡಿದ್ದೇವೆ. ಮಂಡಳಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ' ಎಂದು ಹೇಳಿದರು.

ಪ್ರತಿಕ್ರಿಯಿಸಿ (+)