ಕೆಜೆಪಿಗೆ ಬೆಂಬಲ: ಕ್ರಮಕ್ಕೆ ಡಿವಿಎಸ್ ಆಗ್ರಹ

7

ಕೆಜೆಪಿಗೆ ಬೆಂಬಲ: ಕ್ರಮಕ್ಕೆ ಡಿವಿಎಸ್ ಆಗ್ರಹ

Published:
Updated:

ಮಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕೆಜೆಪಿ ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಆಗ್ರಹಿಸಿದರು.ಮಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು,  ಇಂದಿರಾ ಗಾಂಧಿ ಅವರನ್ನು ಬಿಎಸ್.ಯಡಿಯೂರಪ್ಪ ಹೊಗಳಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಯಡಿಯೂರಪ್ಪ ಕಾರ್ಯಸಾಧನೆಗಾಗಿ ಏನೂ ಮಾಡಲೂ ಹೇಸುವವರಲ್ಲ' ಎಂದರು.`ಯಡಿಯೂರಪ್ಪ ಅವರು ಸಿಬಿಐ ತನಿಖೆಯಿಂದ ಈ ಹಂತದಲ್ಲಿ ಬಚಾವಾಗಲು  ಸಾಧ್ಯವಿಲ್ಲ. ಸಿಬಿಐ ಆರೋಪ ಪಟ್ಟಿ ಸಲ್ಲಿಸಿ ಆಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಹಾಯ ಪಡೆಯಬೇಕಿದ್ದರೆ ಯಾವತ್ತೋ ರಾಜೀನಾಮೆ ನೀಡಬೇಕಿತ್ತು' ಎಂದರು.`ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪಕ್ಷದ ರಾಜ್ಯ ಘಟಕಕ್ಕೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು. ಆದರೆ, ನಾನು ಆ ಹುದ್ದೆಯ ಆಕಾಂಕ್ಷಿ ಅಲ್ಲ' ಎಂದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry