`ಕೆಜೆಪಿ ಅಧಿಕಾರಕ್ಕೆ ಬಂದರೆ ರೈತರಿಗೆ ಪಿಂಚಣಿ'

7

`ಕೆಜೆಪಿ ಅಧಿಕಾರಕ್ಕೆ ಬಂದರೆ ರೈತರಿಗೆ ಪಿಂಚಣಿ'

Published:
Updated:

ಕಂಪ್ಲಿ: ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ಬಂದರೆ 65 ವರ್ಷ ಮೀರಿದ ಎಲ್ಲಾ ರೈತರಿಗೆ ಮಾಸಿಕ ಪಿಂಚಣಿ  ನೀಡಲಾಗುವುದು ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.ಪಟ್ಟಣದಲ್ಲಿ ಸೋಮವಾರ ಕರ್ನಾಟಕ ಜನತಾ ಪಕ್ಷ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಹಿಳೆಯರ ಸ್ವಾವಲಂಬನೆಗಾಗಿ ಪ್ರತ್ಯೇಕ `ಮಹಿಳಾ ಬ್ಯಾಂಕ್' ಆರಂಭಿಸುವ ಉದ್ದೇಶವೂ ಕೆಜೆಪಿ ಹೊಂದಿದೆ ಎಂದರು.ಕೆಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮಿನಾರಾಯಣ ಮಾತನಾಡಿ, ಅಭಿವೃದ್ಧಿ ಹರಿಕಾರ ಬಿ.ಎಸ್. ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಬರಲು ತಮ್ಮ ಅಮೂಲ್ಯವಾದ ಮತ ನೀಡುವಂತೆ ವಿನಂತಿಸಿದರು.ಕಂಪ್ಲಿ ವಿಧಾನಸಭಾಕ್ಷೇತ್ರ ಕೆಜೆಪಿ ಅಭ್ಯರ್ಥಿ ಎಚ್.ಡಿ. ಬಸವರಾಜ್ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ ನೀಡುವಂತೆ ಮನವಿ ಮಾಡಿದರು.ಕೆಜೆಪಿ ಜಿಲ್ಲಾಧ್ಯಕ್ಷ ಹಂಪೇರು ಹಾಲೇಶ್‌ಗೌಡ, ಬಳ್ಳಾರಿ ಗ್ರಾಮಾಂತರ ಅಭ್ಯರ್ಥಿ ಪಾಂಡು, ವಿಜಯನಗರ ಕ್ಷೇತ್ರ ಅಭ್ಯರ್ಥಿ ವೀರೇಶ್, ತಾಲ್ಲೂಕು ಅಧ್ಯಕ್ಷ ಹರ್ಷವರ್ಧನಗೌಡ, ಬಸವರಾಜ್ ಶ್ರೀಧರಗಡ್ಡೆ, ಡಿ. ಶ್ರೀಧರಶೆಟ್ಟಿ,   ಬಿ.ಎಸ್. ವೆಂಕಟಸ್ವಾಮಿ,  ಗೌಳೇರ್ ಬಸವರಾಜ, ಯು.ಎಂ. ವಿದ್ಯಾಶಂಕರ, ವಾಲ್ಮೀಕಿ ಬಸಪ್ಪ, ಚಂದ್ರಶೇಖರ್, ಮಂಜುನಾಥ್, ಪ್ರಭುಲಿಂಗದೇವ, ಮಹಿಳಾ ಘಟಕ ಅಧ್ಯಕ್ಷೆ ಕಮಲ ಬಸವರಾಜ್,  ಮಲ್ಲನಗೌಡ, ಅದೆಪ್ಪ, ಶ್ರೀಧರಗೌಡ, ಟಿ. ಶರಣಪ್ಪ, ಜೀರು ಬಾಬು, ರೈತ ಘಟಕ ಅಧ್ಯಕ್ಷ ಮಂಜು ನಾಥ್, ರಾಜ್ಯ ಎಸ್‌ಟಿ ಅಧ್ಯಕ್ಷ ಮಾನಪ್ಪ ನಾಯಕ, ತಾಲ್ಲೂಕು ಯುವ ಘಟಕ ಅಧ್ಯಕ್ಷ ಫಾಲಾಕ್ಷ ಗೌಡ,  ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ  ಎಸ್. ಎಂ. ಬಸಯ್ಯಸ್ವಾಮಿ, ಅಲ್ಪ ಸಂಖ್ಯಾತ ಅಧ್ಯಕ್ಷ ಖಾದರ್ ಭಾಷ, ಇ. ಮಲ್ಲಿಕಾ ರ್ಜುನ ಸ್ವಾಮಿ ಇತರರು ಹಾಜರಿದ್ದರು.ಅಬಕಾರಿ ದಾಳಿ:  ಮದ್ಯ ವಶ

ಕಂಪ್ಲಿ: ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮದಿಂದ ಫಕ್ಕೀರಪ್ಪ ಎನ್ನುವ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಸುಮಾರು ರೂ. 2400 ಮೌಲ್ಯದ ಮದ್ಯವನ್ನು ಹೊಸ ಚಿನ್ನಾಪುರ ಗ್ರಾಮಕ್ಕೆ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿ ದ್ವಿಚಕ್ರ ವಾಹನ ಮತ್ತು ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry