ಮಂಗಳವಾರ, ನವೆಂಬರ್ 19, 2019
21 °C

ಕೆಜೆಪಿ ಅಭ್ಯರ್ಥಿಯಿಂದ ಹಣ ವಿತರಣೆ: ಆರೋಪ

Published:
Updated:
ಕೆಜೆಪಿ ಅಭ್ಯರ್ಥಿಯಿಂದ ಹಣ ವಿತರಣೆ: ಆರೋಪ

ಚಿತ್ರದುರ್ಗ:  ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಂ. ಚಂದ್ರಪ್ಪ ಚುನಾವಣೆ ಪ್ರಚಾರ ಸಮಯದಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡಿದ್ದಾರೆ ಎಂದು ಭರಮಸಾಗರ ಗ್ರಾಮ ಪಂಚಾಯ್ತಿ ಸದಸ್ಯ ಶಿವಶಂಕರ ಆರೋಪಿಸಿದ್ದಾರೆ.`ಬೇವಿನಹಳ್ಳಿಯ ಗಣೇಶ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಹಣ ಹಂಚಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ. ಚುನಾವಣೆ ಅಧಿಕಾರಿಗಳಿಗೆ ದೂರು ನೀಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.ಚುನಾವಣಾ ಅಧಿಕಾರಿ ಭೇಟಿ: ಶಿವಶಂಕರ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜಾಗೃತದ ದಳದ ಅಧಿಕಾರಿ ಬಿ. ರಾಮಾಂಜನೇಯ ಬೇವಿನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.`ಗ್ರಾಮ ಪಂಚಾಯ್ತಿ ಸದಸ್ಯ ಶಿವಶಂಕರ್ ಅವರು ಕೆಜೆಪಿ ಅಭ್ಯರ್ಥಿ ಚಂದ್ರಪ್ಪ ಅವರು ಮತಪಡೆಯುವ ಉದ್ದೇಶದಿಂದ ಸಾರ್ವಜನಿಕರಿಗೆ ಹಣ ಹಂಚಿರುವುದಾಗಿ ಆರೋಪಿಸಿ, ಅದರ ಬಗ್ಗೆ ದಾಖಲೆ ಇರುವ ಸಿ.ಡಿ ಒಂದನ್ನು ನನಗೆ ನೀಡಿದ್ದಾರೆ. ಪಂಚರ ಸಮ್ಮುಖ ದಲ್ಲಿ ಅದನ್ನು ಪಡೆದುಕೊಳ್ಳಲಾಗಿದೆ.ಪ್ರಕರಣವನ್ನು ತಹಶೀಲ್ದಾರರ ಗಮನಕ್ಕೆ ತಂದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ರಾಮಾಂಜನೇಯ ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)