ಕೆಜೆಪಿ ಉಪಾಧ್ಯಕ್ಷರಿಗೆ ಬೆದರಿಕೆ ಕರೆ

7

ಕೆಜೆಪಿ ಉಪಾಧ್ಯಕ್ಷರಿಗೆ ಬೆದರಿಕೆ ಕರೆ

Published:
Updated:

ಬೆಂಗಳೂರು: `ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕ, ರಾಮ ರಾಜ್ಯ ಆಗುವ ಬದಲು ಗೂಂಡಾ ರಾಜ್ಯ ಆಗಿದೆ' ಎಂದು ಕೆಜೆಪಿ ಉಪಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಆರೋಪಿಸಿದರು.`ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಗರಿಂದ ನನಗೆ ಕೆಲವು ಬೆದರಿಕೆ ಕರೆಗಳು ಬಂದಿವೆ' ಎಂದು ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.`ಬಿಜೆಪಿ ಸರ್ಕಾರವೆಂದರೆ, ಯಡಿಯೂರಪ್ಪ ಅವರ ಆಡಳಿತಾವಧಿಯೂ ಸೇರಿದೆ ಅಲ್ಲವೇ?' ಎಂಬ ಪ್ರಶ್ನೆಗೆ, `ಅವರ ಅವಧಿಯಲ್ಲೂ ರಾಜ್ಯದ ಕಾನೂನು - ಸುವ್ಯವಸ್ಥೆ ಅಲ್ಪಸ್ವಲ್ಪ ಏರುಪೇರು ಆಗಿದ್ದಿರಬಹುದು' ಎಂದು ಉತ್ತರಿಸಿದರು.ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಕರ್ನಾಟಕದ ಹಿತಕ್ಕೆ ಧಕ್ಕೆ ತಂದರೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೆಜೆಪಿ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry