ಮಂಗಳವಾರ, ನವೆಂಬರ್ 19, 2019
29 °C

ಕೆಜೆಪಿ `ಕೆಜಿ', ಬಿಜೆಪಿ `ಕ್ವಿಂಟಲ್', ಹಮ್ ತೋ `ಟನ್' ಹೈ- ಖರ್ಗೆ

Published:
Updated:

ರಾಯಚೂರು:  ಏ ಕೆಜೆಪಿ ಸಿರ್ಫ್ ಕೆಜಿ ಹೈ (ಕಿಲೋ ಗ್ರಾಂ). ಬಿಜೆಪಿ ಏ ಕ್ವಿಂಟಲ್ ಹೈ. ಹಮ್ (ಕಾಂಗ್ರೆಸ್) ತೋ ಟನ್ ಹೈ! ನಮ್ಮನ್ನು ಯಾರೂ ಎತ್ತಲು ಆಗುವುದೇ ಇಲ್ಲ.ಹೀಗೆ ಕೇಂದ್ರ ಕಾರ್ಮಿಕ ಖಾತೆ ಸಚಿವ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಇಲ್ಲಿ ಪಕ್ಷದ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತು ಭಾರವನ್ನು ವಿವರಿಸಿದರು.ಬಿಜೆಪಿ ಸರ್ಕಾರದ 5 ವರ್ಷದ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಅವರು, `ಲೂಟೋ... ಬಾಟೋ...' (ಲೂಟಿ ಮಾಡಿ ಹಂಚಿಕೊಳ್ಳಿ) ಕೆಲ್ಸ ಮಾಡಿದ್ರು. ಸರ್ಕಾರ ಅಭಿವೃದ್ಧಿ ಬದಲಾಗಿ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಬಿಜೆಪಿಯು ಕೇವಲ ಐದೇ ವರ್ಷಗಳಲ್ಲಿ ಕೆಜೆಪಿ, ಬಿಎಸ್‌ಆರ್ ಮತ್ತು ಬಿಜೆಪಿ ಎಂದು ಹೋಳಾಯ್ತು' ಎಂದು ನುಡಿದರು.

ಪ್ರತಿಕ್ರಿಯಿಸಿ (+)