ಮಂಗಳವಾರ, ನವೆಂಬರ್ 19, 2019
23 °C

ಕೆಜೆಪಿ ಸಮಾವೇಶದಲ್ಲಿ ನಿರಾಣಿ

Published:
Updated:

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಇಲ್ಲಿ ಬುಧವಾರ ನಡೆದ ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಾವು ಬಿಜೆಪಿ ತೊರೆಯುವುದು ನಿಶ್ಚಿತ ಎಂಬುದನ್ನು ಖಚಿತಪಡಿಸಿದರು.ಕಾರ್ಯಕರ್ತರ ಸಭೆ ನಡೆಯುವಾಗ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಅವರನ್ನು ಮುಖಂಡರು ವೇದಿಕೆಗೆ ಬರುವಂತೆ ಒತ್ತಾಯಿಸಿದರು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ವೇದಿಕೆ ಏರಿದ ನಿರಾಣಿ ಮಾತನಾಡಿ, `ವಿಧಾನಸಭಾ ಚುನಾವಣೆಯಲ್ಲಿ ನಾನು ಜಮಖಂಡಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಆದರೆ, ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ಇದೇ 5ರಂದು ಸಂಜೆ 5 ಗಂಟೆಗೆ ಪ್ರಕಟಿಸುತ್ತೇನೆ' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)