ಕೆಟ್ಟವರು ಯಾರು?

7

ಕೆಟ್ಟವರು ಯಾರು?

Published:
Updated:

ವಿಧಾನ ಸಭೆಯಲ್ಲಿ ಅಶ್ಲೀಲ ವೀಡಿಯೊ ನೋಡಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿಯ ಮೂವರು ಶಾಸಕರು ಉತ್ತಮ ಚಾರಿತ್ರ್ಯವಂತರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ಪತ್ರ ನೀಡಿರುವ ಮಾಹಿತಿಯನ್ನು ಪತ್ರಿಕೆಗಳಲ್ಲಿ ಓದಿ ಆಶ್ಚರ್ಯವಾಯಿತು.ಮಾಜಿ ಮುಖ್ಯಮಂತ್ರಿಗಳು ಇಂತಹ ಅತಾರ್ಕಿಕ ಹೇಳಿಕೆ ನೀಡುತ್ತಾರೆ ಎಂದು ಜನರು ಎಂದು ನಿರೀಕ್ಷಿಸಿರಲಿಲ್ಲ.ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಇತರರಿಗೆ ಮಾದರಿ ಆಗಿರಬೇಕು ಎಂದು ಜನರು ಬಯಸುತ್ತಾರೆ. ಆದರೆ ಸಚಿವರೇ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಅಶ್ಲೀಲ ಚಿತ್ರ ನೋಡಿದ್ದನ್ನು ಇಡೀ ದೇಶವೇ ನೋಡಿದೆ. ಅವರನ್ನು ಉತ್ತಮರು ಎನ್ನುವುದಾದರೆ ಕೆಟ್ಟವರು ಯಾರು? ಯಡಿಯೂರಪ್ಪ ಉತ್ತರ ಹೇಳುವರೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry