ಕೆಟ್ಟವರ ಜತೆಯಿದ್ದ ಉತ್ತಮ ವ್ಯಕ್ತಿ ಆಚಾರ್ಯ: ಸುರೇಶ್‌ಗೌಡ

7

ಕೆಟ್ಟವರ ಜತೆಯಿದ್ದ ಉತ್ತಮ ವ್ಯಕ್ತಿ ಆಚಾರ್ಯ: ಸುರೇಶ್‌ಗೌಡ

Published:
Updated:

ಮದ್ದೂರು: ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ನಿಧನದ ಅಂಗವಾಗಿ ತಾಲ್ಲೂಕಿನ ಬೆಸಗರಹಳ್ಳಿಯಲ್ಲಿ ಮಂಗಳವಾರ ಸಂಜೆ ಆರಂಭಗೊಂಡ ಮೈಸೂರು ವಿಭಾಗ ಮಟ್ಟದ ಜಾನಪದ ಕಲಾ ಮೇಳವನ್ನು ಶ್ರದ್ಧಾಂಜಲಿ ಸಂಜೆ ಕಾರ್ಯ ಕ್ರಮವನ್ನಾಗಿ ಪರಿವರ್ತಿಸಿದ ಘಟನೆ ನಡೆಯಿತು.ಶಾಸಕ ಕೆ.ಸುರೇಶಗೌಡ ಮೇಳ ಉದ್ಘಾಟಿಸಿ ಮಾತನಾಡಿ, ಕೆಟ್ಟ ಜನಗಳ ನಡುವೆ ಇದ್ದ ಸಜ್ಜನ ರಾಜಕಾರಣಿ ವಿ.ಎಸ್.ಆಚಾರ್ಯ ಉತ್ತಮ ನಡವಳಿಕೆಯ ವ್ಯಕ್ತಿಯಾಗಿದ್ದರು. ಅವರ ಸರಳತೆ, ಸಜ್ಜನಿಕೆಯ ವ್ಯಕ್ತಿತ್ವ ಎಂದಿಗೂ ಮರೆಯಲಾಗದ್ದು. ಜಾನಪದ ಕಲೆ , ಸಂಸ್ಕೃತಿಯ ಬಗೆಗೆ ಅವರಲ್ಲಿದ್ದ ವಿಶೇಷ ಕಾಳಜಿ ಅನುಪಮ ಎಂದು ಬಣ್ಣಿಸಿದರು.ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮಿ ಸೀತಾಪುರ, ಗೋವಿಂದ್, ವ.ನಂ.ಶಿವರಾಮು ಸಂವಾದದಲ್ಲಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ಕೋಮಲಸ್ವಾಮಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಾದಪ್ಪ, ಗ್ರಾಪಂ ಅಧ್ಯಕ್ಷೆ ಸುಜಾತ ಶಿವರಾಮು, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ನಾಗಣ್ಣಗೌಡ, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಎಚ್.ಪಿ.ಮಂಜುಳ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಯುವ ಪ್ರಶಸ್ತಿ ವಿಜೇತ ಜಿ.ಎನ್.ಕೆಂಪರಾಜು, ಕಲಾವಿದ ಚಿಕ್ಕರಸಿನಕೆರೆ ಚಿಕ್ಕಬೋರಯ್ಯ, ಲಾರಾ ಪ್ರಸನ್ನ ಇತರರು  ಉಪಸ್ಥಿತರಿದ್ದರು. ಗಾಯಕರಾದ ಹುರುಗಲವಾಡಿ ರಾಮಯ್ಯ, ಗೊರವಾಲೆ ರುದ್ರಪ್ಪ, ಅಂಬರಹಳ್ಳಿಸ್ವಾಮಿ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಬಿಜೆಪಿ ಸಂತಾಪ

ಮಂಡ್ಯ: ಮಂಗಳವಾರ ನಿಧನರಾದ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ಅಗಲಿಕೆಗೆ ಜಿಲ್ಲಾ ಬಿಜೆಪಿ ಸಂತಾಪ ವ್ಯಕ್ತಪಡಿಸಿದೆ.ಪಕ್ಷದ ಕಚೇರಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದ ಮುಖಂಡರು, ಆಚಾರ್ಯರವರು ಪಕ್ಷದ ಪ್ರಗತಿ, ಸಂಘಟನೆಯಲ್ಲಿ ಅಗತ್ಯ ಸಲಹೆ ನೀಡುತ್ತಿದ್ದರು. ಪಕ್ಷದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಮಹೇಶ್, ಮುಖಂಡ ಬಿ.ಲಿಂಗೇಗೌಡ, ಹೊ.ರಾ. ಕುಮಾರಸ್ವಾಮಿ, ಪುಟ್ಟ ಅಂಕಯ್ಯ ಮತ್ತು ಇತರ ಸ್ಥಳೀಯ ಪದಾಧಿಕಾರಿಗಳಿದ್ದರು.ಸಂತಾಪ: ಡಾ. ವಿ.ಎಸ್.ಆಚಾರ್ಯ ಅಗಲಿಕೆಗೆ ಕಾಡಾ ಅಧ್ಯಕ್ಷ ಡಿ.ರಾಮ ಲಿಂಗಯ್ಯ ಸಂತಾಪ ವ್ಯಕ್ತಪಡಿಸಿದ್ದು, ಅವರು ಬಿಜೆಪಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿಕೆಯಲ್ಲಿ ಸ್ಮರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry