ಭಾನುವಾರ, ಡಿಸೆಂಬರ್ 15, 2019
24 °C

ಕೆಟ್ಟುನಿಂತ ಸಕ್ಕಿಂಗ್‌ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಟ್ಟುನಿಂತ ಸಕ್ಕಿಂಗ್‌ ಯಂತ್ರ

ಕುಷ್ಟಗಿ: ಶೌಚಾಲಯ ತ್ಯಾಜ್ಯ ವಿಲೇವಾರಿಗೆ ಇಲ್ಲಿನ ಪುರಸಭೆ ಲಕ್ಷಾಂತರ ರೂಪಾಯಿ ನೀಡಿ ಖರೀ ದಿಸಿದ ಸಕ್ಕಿಂಗ್ ಯಂತ್ರ ಕೆಟ್ಟು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಕಾರ್ಮಿಕರು ಶೌಚಾಲಯ ಗುಂಡಿಗೆ ಇಳಿಯುವುದು ಹಾಗೂ ವಿಲೇವಾರಿ ಮಾಡುವ ಪದ್ಧತಿಯನ್ನು ನಿಷೇಧಿಸಿದ ನಂತರ ಸಾರ್ವಜನಿಕ, ಸರ್ಕಾರಿ ಕಚೇರಿಗಳು ಹಾಗೂ ಸಮುದಾಯ ಶೌಚಾಲಯಗಳಲ್ಲಿನ ತ್ಯಾಜ್ಯವನ್ನು ಯಂತ್ರಗಳ ಮೂಲಕ ವಿಲೇವಾರಿ ಮಾಡುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ, ಇದರಿಂದ ಸಕ್ಕಿಂಗ್‌ ಯಂತ್ರಕ್ಕೆ ಬೇಡಿಗೆ ಬಂದಿತ್ತು.ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆ ಕಳೆದ ವರ್ಷ ರೂ 8 ಲಕ್ಷ ವೆಚ್ಚದ ಸುಸಜ್ಜಿತ ಸಕ್ಕಿಂಗ್‌ ಯಂತ್ರ ಖರೀದಿಸಿತ್ತು. ಬೆಂಗಳೂರು ಮೂಲದ ಸಾಧನಾ ಎನ್ವಿರಾನ್‌ಮೆಂಟ್‌ ಸಂಸ್ಥೆ ಈ ಯಂತ್ರವನ್ನು ಪೂರೈಸಿದೆ. ಯಂತ್ರದ ನಿರ್ವಹಣೆ ಅವಧಿ ಈಗ ಪೂರ್ಣ ಗೊಂಡಿದೆ. ಹೀಗಾಗಿ ಹಣ ಹಿಂದಿರುಗಿಸು ವಂತೆ ಕಂಪೆನಿ ಪುರಸಭೆಗೆ ಪತ್ರ ಬರೆದಿದೆ. ಆದರೆ, ಸಕ್ಕಿಂಗ್‌ ಯಂತ್ರವನ್ನು ದುರಸ್ತಿ ಮಾಡಿಕೊಡುವ ಸೇವೆ ಮುಂದುವರಿಸು ವಂತೆ ಸೂಚಿಸಿರುವ ಪುರಸಭೆ ಈವರೆಗೂ ಇ.ಎಂ.ಡಿ ಮೊತ್ತ ಹಿಂದಿರು ಗಿಸಿಲ್ಲ ಎಂದು ಮೂಲಗಳು ತಿಳಿಸಿವೆ.ಸಕ್ಕಿಂಗ್‌ ಯಂತ್ರ ಲಭ್ಯವಾಗದ ಕಾರಣ ಪಟ್ಟಣದ ಬಹುತೇಕ ಶೌಚಾಲಯ ಗುಂಡಿಗಳು ಭರ್ತಿಯಾ ಗಿವೆ. ಜನರು ಪುರಸಭೆಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಗುಂಡಿ ಶುಚಿಗೆ ಮಾನವ ಸೇವೆ ಬಳಸಿಕೊಳ್ಳುವಂತಿಲ್ಲ. ಇತ್ತ ಯಂತ್ರವೂ ಸಿಗದೆ ಜನತೆ ಪರದಾಡುತ್ತಿದ್ದಾರೆ.ಜನರ ಆಕ್ರೋಶದ ನಂತರ ಶುಕ್ರವಾರ ಪುರಸಭೆ ಅಧಿಕಾರಿಗಳು 25 ಕಿ.ಮೀ ದೂರದ ಇಳಕಲ್‌ ಪಟ್ಟಣದಿಂದ ತಾತ್ಕಾಲಿಕವಾಗಿ ಸಕ್ಕಿಂಗ್‌ ಯಂತ್ರ ತರಿಸಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಸಕ್ಕಿಂಗ್‌ ಯಂತ್ರ ಕಳುಹಿಸುವಂತೆ ಪುರ ಸಭೆ ಜಿಲ್ಲಾಡಳಿತಕ್ಕೆ ಪತ್ರ ಸಹ ಬರೆದಿದೆ.ಒಂದು ಟ್ಯಾಂಕ್‌ ತ್ಯಾಜ್ಯ ವಿಲೇವಾರಿಗೆ ಪುರಸಭೆ ರೂ 1,000 ಶುಲ್ಕ ವಸೂಲಿ ಮಾಡುತ್ತಿದೆ. ಆದರೆ, ಸಕ್ಕಿಂಗ್‌ ಯಂತ್ರ ಕೆಲಸ ಮಾಡಿದ್ದಕ್ಕಿಂತ ಸ್ಥಗಿತಗೊಂಡಿದ್ದೇ ಹೆಚ್ಚು, ಕಳಪೆ ಗುಣಮಟ್ಟದ ಕಾರಣ ಈ ಯಂತ್ರ ಪದೇಪದೇ ದುರಸ್ತಿಗೆ ಬರುತ್ತದೆ ಎಂಬುದು ಜನರ ದೂರು.

ಪ್ರತಿಕ್ರಿಯಿಸಿ (+)