ಕೆಟ್ಟ ಆಲೋಚನೆ ಕೂಡ ಭ್ರಷ್ಟಾಚಾರಕ್ಕೆ ಸಮ

7
ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ್ ಹರೀಶ್‌ಕುಮಾರ್ ಹೇಳಿಕೆ

ಕೆಟ್ಟ ಆಲೋಚನೆ ಕೂಡ ಭ್ರಷ್ಟಾಚಾರಕ್ಕೆ ಸಮ

Published:
Updated:

ಚಿತ್ರದುರ್ಗ: ದೇಶದ ಎಲ್ಲೆಡೆ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದ್ದು, ಬರಿ ಹಣ ಲೂಟಿ ಮಾಡುವುದಷ್ಟೇ ಭ್ರಷ್ಟಾಚಾರವಲ್ಲ. ಮಾನವ ತನ್ನ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮಾಡುವುದು ಹಾಗೂ ಅದರಂತೆ ನಡೆದುಕೊಳ್ಳುವುದು ಸಹ ಒಂದು ರೀತಿ ಭ್ರಷ್ಟಾಚಾರವಾಗಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ್ ಹರೀಶ್‌ಕುಮಾರ್ ತಿಳಿಸಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶಗಳನ್ನು ನಾಗರಿಕರಿಗೆ ತಿಳಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಜ. 6ರವರೆಗೆ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.ಕಾನೂನಿನ ಅರಿವಿನ ಮೂಲಕ ರಾಷ್ಟ್ರದಲ್ಲಿ ಶಾಂತಿಯುತ, ಶೋಷಣೆ ಮುಕ್ತ ಹಾಗೂ ಪ್ರತಿಯೊಬ್ಬರೂ ಕೂಡ ಉತ್ತಮ ನಾಗರಿಕರಾಗುವಂತೆ ಮಾಡುವುದು ಪ್ರಾಧಿಕಾರದ ಪ್ರಮುಖ ಆಶಯವಾಗಿದೆ.

ಅದನ್ನು ಮೀರಿ ಕೆಲವೊಮ್ಮೆ ಅಹಿತಕರ ಘಟನೆ ನಡೆದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗ್ಗೊಳ್ಳುವುದು ಸಹ ನ್ಯಾಯಾಲಯದ ಜವಾಬ್ದಾರಿಯಾಗಿದ್ದು, ಮುಂದೆ ತಪ್ಪು ಮಾಡಬಾರದು ಎನ್ನುವ ಉದ್ದೇಶಕ್ಕೆ ಶಿಕ್ಷೆ ನೀಡುವ ಪರಿಪಾಠ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಹಿಂದಿನ ಕಾಲದ ಸಚ್ಚಾರಿತ್ರ್ಯ ನಡವಳಿಕೆಗಳು ನೈತಿಕ ಮೌಲ್ಯಗಳು ಇಂದು ಕಾನೂನಾಗಿ ರೂಪುಗೊಂಡಿವೆ. ಸಮಾಜವನ್ನು ಸರಿದಾರಿಯಲ್ಲಿ ನಡೆಸುವುದು ಧರ್ಮದ ಕೆಲಸವಾಗಿದೆ. ಯಾವುದೇ ಧರ್ಮಗಳು ಕೆಟ್ಟದ್ದನ್ನು ಮಾಡು ಎನ್ನುವುದಾಗಿ ಹೇಳುವುದಿಲ್ಲ.

ಎ್ಲ್ಲಲ ಧರ್ಮ ಶಾಂತಿ ಮಂತ್ರವನ್ನು ಸಾರಿವೆ. ಆದರೆ, ಕೆಲವರು ಮಾತ್ರ ಧರ್ಮದ ಹೆಸರಿನಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡುತ್ತ್ದ್ದಿದು, ಇದು ಮೊದಲು ನಿಲ್ಲಬೇಕು. ಉಳ್ಳವರ ದಬ್ಬಾಳಿಕೆಗೆ ಬಲಿಯಾಗುವ ಬಡ ಜನತೆಗೆ ನ್ಯಾಯ ಒದಗಿಸುವುದು ಪ್ರಾಧಿಕಾರದ ಮುಖ್ಯ ಉದ್ದೇಶ ಎಂದು ತಿಳಿಸಿದರು.ವರ್ಷದಲ್ಲಿ ಎರಡು ಬಾರಿ ಜಿಲ್ಲೆಯ ಜನರಿಗೆ ಅರಿವು ಮೂಡಿಸುವ ಉದ್ದೇಶಕ್ಕಾಗಿ ಕಾನೂನು ಸಾಕ್ಷರತಾ ರಥ ಸಂಚಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇವಲ ಕಾನೂನು ಜಾರಿ ಮಾಡುವುದು ಮುಖ್ಯವಲ್ಲ. ಅದನ್ನು ಸರಿಯಾಗಿ ಅನುಷ್ಠಾನ ಮಾಡುವುದು ಎಲ್ಲರ ಕರ್ತವ್ಯವಾಗಿದೆ.

ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ರಾಷ್ಟ್ರದ ಮುಂದಿನ ಭಾವೀ ಪ್ರಜೆಗಳಾಗಿದ್ದು, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಜವಾಬ್ದಾರಿ ಅವರ ಮೇಲಿದ್ದು, ಕಾನೂನಿನ ಚೌಕಟ್ಟಿನಲ್ಲಿಯೇ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಣಾಧಿಕಾರಿ ನಾರಾಯಣಸ್ವಾಮಿ ಮಾತನಾಡಿ, ಪ್ರತಿಯೊಂದು ವಿಷಯಕ್ಕೂ ಕಾನೂನು ಅವಶ್ಯಕವಾಗಿದೆ. ಅದನ್ನು ಬಿಟ್ಟು ಬದುಕಿದರೆ ಜೀವನದಲ್ಲಿ ಎಡರು ತೊಡರು ಅನುಭವಿಸಬೇಕಾಗುತ್ತದೆ. ಸಂಚಾರಿ ಕಾನೂನನ್ನು ಸರಿಯಾಗಿ ಪಾಲನೆ ಮಾಡದಿದ್ದರೆ ಅಪಘಾತಗಳು ಸಂಭವಿಸುತ್ತವೆ. ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ ತಮ್ಮ ಕರ್ತವ್ಯ ಕೂಡ ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.ಸಂತ ಜೋಸೆಫ್ ಕಾನ್ವೆಂಟ್‌ನ ಪ್ರಾಂಶುಪಾಲ ಅರುಣ್ ಲಿಲ್ಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸದಾಶಿವ ಸುಲ್ತಾನಿಪುರಿ, ಸರ್ಕಾರಿ ಅಭಿಯೋಜಕ ಜಯರಾಂ, ಜಿಲ್ಲಾ ಆರೋಗ್ಯಾಧಿಕಾರಿ ಮಹಾಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ ರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಶಿವಣ್ಣರೆಡ್ಡಿ, ಉಪಾಧ್ಯಕ್ಷ ವಿಜಯಕುಮಾರ್, ಡಾ.ಜಯಮ್ಮ ಹಾಜರಿದ್ದರು.ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಶೀಲಾ ಬಾಲ್ಯ ವಿವಾಹ ಮತ್ತು ಬಾಲ ನ್ಯಾಯ ಕಾಯ್ದೆ ಬಗ್ಗೆ ಹಾಗೂ ವಕೀಲ ಜೆ.ಎಂ. ಉಮಾಪತಿ ಮೋಟಾರ್ ವಾಹನ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ಚೇತನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry