ಮಂಗಳವಾರ, ಜನವರಿ 21, 2020
29 °C

ಕೆಡಿಪಿ ಸಭೆ: ಸೌಲಭ್ಯ ಕಲ್ಪಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಡ್ಡಾಯವಾಗಿ ಕುಡಿ ಯುವ ನೀರು, ವಿದ್ಯುತ್ ಹಾಗೂ ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸು ವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರದ ನೂತನ ಮಾರ್ಗ ದರ್ಶಿಯ ಪ್ರಕಾರ ಅಂಗನ ವಾಡಿ ಕೇಂದ್ರಗಳಿಗೆ ಕಡ್ಡಾಯವಾಗಿ ಕುಡಿ ಯು ವ ನೀರು, 13ವೈಡಿ3

ಯಾದಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾ ಯಿತಿ ಪ್ರತಿಪಕ್ಷದ ನಾಯಕ ಬಸವರಾಜ ಖಂಡ್ರೆ ಮಾತನಾಡಿದರು.

ಮುಖ್ಯ ಯೋಜನಾಧಿಕಾರಿ ಬಸವ ರಾಜ, ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ಎಸ್‌.ಎ. ಜಿಲಾನಿ, ಅಧ್ಯಕ್ಷೆ ಭೀಮಮ್ಮ ಚಪೇಟ್ಲಾ, ಉಪಾಧ್ಯಕ್ಷೆ ಚನ್ನಬಸಮ್ಮ ಸೋಮಣ್ಣೋರ್‌ ಇದ್ದರು ವಿದ್ಯುತ್ ಮತ್ತು ಶೌಚಾಲಯಗಳ ಸೌಲಭ್ಯಗಳನ್ನು ಕಲ್ಪಿಸಬೇಕು. ನೂತನ ಕಟ್ಟಡ ನಿರ್ಮಾಣ ಮಾಡುವ ಮೊದ ಲು ನಿವೇಶನಗಳಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಅಡತಡೆ ಇರದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರ ಗಳಿಗೆ ಬೇಕಾಗುವ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯ ವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ದುರಸ್ತಿ ಮಾಡುವ ಅಂಗನವಾಡಿ ಕಟ್ಟಡಗಳ ಮರು ದುರಸ್ತಿಯನ್ನು ಮುಂದಿನ 10 ವರ್ಷಗಳ ಅವಧಿಗೆ ಆಗುವಂತೆ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಬಾಕಿ ಉಳಿ ದಿರುವ ಶುದ್ಧೀಕರಣ ಘಟಕಗಳಿಗೆ ತಕ್ಷಣ ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕು. ಕುಡಿಯುವ ನೀರಿನ ಸೌಲಭ್ಯ ದೊರೆ ಯುವಂತೆ ನೋಡಿಕೊಳ್ಳಬೇಕು. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ರಸ್ತೆ ಮುಚ್ಚುವ ಕಾರ್ಯ ಮಾಡಬೇಕು.

ತಾಳೆ ಬೆಳೆ ಕ್ಷೇತ್ರ ಅಧ್ಯಯನಕ್ಕೆ ರೈತರ ಕ್ಷೇತ್ರ ಪ್ರವಾಸ ಮಾಡಬೇಕು. ಕುರಿ ದೊಡ್ಡಿ ಸೌಲಭ್ಯ ಅರ್ಹ ಫಲಾನು ಭವಿಗಳಿಗೆ ದೊರೆಯುವಂತೆ ನೋಡಿ ಕೊಳ್ಳಬೇಕು. ರೈತರಿಗೆ ಗುಣಮಟ್ಟದ ರಸಗೊಬ್ಬರ ದೊರೆಯುವಂತೆ ನೊಡಿ ಕೊಳ್ಳಬೇಕು. ನಿರ್ಮಾಣ ಹಂತದಲ್ಲಿ ರುವ ಶಾಲಾ ಕಟ್ಟಡಗಳ ಕಾಮಗಾರಿ ಗುಣಮಟ್ಟ ಇರುವಂತೆ ನೊಡಿಕೊಳ್ಳ ಬೇಕು ಎಂದು ಅಧಿಕಾರಿಗಳಿಗೆ ಸೂಚಿ ಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭೀಮಮ್ಮ ಚಪೇಟ್ಲಾ ಮಾತನಾಡಿ, ಬಿ.ಎನ್‌. ತಾಂಡಾಕ್ಕೆ ಕುಡಿಯುವ ನೀರಿನ ಸೌಲಭ್ಯ, ಕಾಕಲವಾರ ಗ್ರಾಮಕ್ಕೆ ರಸ್ತೆ ಸೌಲಭ್ಯ, ಜಿಲ್ಲೆಯ ವಿವಿಧ ಆಸ್ಪತ್ರೆ ಗ ಳಿಗೆ ವೈದ್ಯರ ಸೌಲಭ್ಯ ಹಾಗೂ ರೈತರಿಗೆ ಬೆಳೆ ವಿಮೆ ಸೌಲಭ್ಯ ದೊರಕಿಸಿ ಕೊಡುವಂತೆ ಸಂಬಂಧಿಸಿದ ಅಧಿಕಾರಿ ಗಳಿಗೆ ಸೂಚನೆ ನೀಡಿದರು.ಸುವರ್ಣ ಗ್ರಾಮೋದಯ ಯೋಜ ನೆಯಡಿ ನಾಲ್ಕು ಹಂತದಲ್ಲಿ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿ ಗಳ ಬಗ್ಗೆ ಮತ್ತು 5ನೇ ಹಂತದ ಕಾಮಗಾರಿ ಕೈಗೊಳ್ಳಲು ಖರ್ಚು ವೆಚ್ಚ ವರದಿ ತಾಯಾರಿಸಲಾಗುತ್ತಿದೆ ಎಂದು ಭೂಸೇ ನಾ ನಿಗದಮ ಅಧಿಕಾರಿಗಳು ವಿವರಿ ಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚನ್ನಬಸಮ್ಮ ಸೋಮಣ್ಣೋರ್‌, ಪ್ರತಿ ಪಕ್ಷದ ನಾಯಕ ಬಸವರಾಜ ಖಂಡ್ರೆ, ಮುಖ್ಯ ಯೋಜನಾಧಿಕಾರಿ ಬಸವ ರಾಜ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಬಸಲಿಂಗಮ್ಮ ಮೇಟಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)