ಕೆಡಿಸಿಸಿ ಬ್ಯಾಂಕ್ ಕೋರ್ ಬ್ಯಾಂಕಿಂಗ್: ಒಪ್ಪಂದ

7

ಕೆಡಿಸಿಸಿ ಬ್ಯಾಂಕ್ ಕೋರ್ ಬ್ಯಾಂಕಿಂಗ್: ಒಪ್ಪಂದ

Published:
Updated:

ಶಿರಸಿ: ನಿರಂತರವಾಗಿ ಲಾಭದಲ್ಲಿ ಮುಂದುವರಿದಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿ ಸಿಕೊಳ್ಳಲು ಮುಂದಾಗಿದೆ. ನಬಾರ್ಡ್ ಸಹಯೋಗದೊಂದಿಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಟಾಟಾ ಕನ್ಸ್‌ಲ್ಟನ್ಸಿ ಸರ್ವೀಸಸ್ ಜೊತೆ ಬ್ಯಾಂಕ್ ಒಡಂಬಡಿಕೆ ಮಾಡಿಕೊಂಡಿದೆ.ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತಿತರ ಪ್ರಮುಖರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು. 1920ರಲ್ಲಿ ಸ್ಥಾಪಿತವಾದ ಕೆಡಿಸಿಸಿ ಬ್ಯಾಂಕ್ ಉತ್ತರ ಕನ್ನಡ ಜಿಲ್ಲೆಯಲ್ಲಿ  47 ಶಾಖೆ ಹೊಂದಿದೆ.

 

ಗ್ರಾಮೀಣ ಪ್ರದೇಶದಲ್ಲೂ ಬ್ಯಾಂಕ್‌ನ ಶಾಖೆಗಳಿವೆ. ಭಾರತೀಯ ರಿಝರ್ವ್ ಬ್ಯಾಂಕ್‌ನಿಂದ ಅನುಮತಿ ಪಡೆದ ಬ್ಯಾಂಕ್ ಆಗಿದ್ದು, ಇತರ ವಾಣಿಜ್ಯ ಬ್ಯಾಂಕ್ ಒದಗಿಸುತ್ತಿ ರುವ ಎಲ್ಲ ರೀತಿಯ ಠೇವು ಮತ್ತು ಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ.

 

ಬ್ಯಾಂಕಿನ ಎಲ್ಲ ಶಾಖೆಗಳು ಗಣಕೀಕರಣಗೊಂಡಿವೆ. ಪ್ರಸ್ತುತ ಗ್ರಾಹಕರಿಗೆ ಎಟಿಎಂ, ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತಿತರ ತಂತ್ರಜ್ಞಾನ ಆಧಾರಿತ ಸೇವೆ ನೀಡಲು ಕೋರ್ ಬ್ಯಾಂಕಿಂಗ್ ಅಳವಡಿಸಲಾಗುತ್ತಿದೆ. ಇದರಿಂದ ಎಲ್ಲ ಸಹಕಾರಿ ಸಂಸ್ಥೆಗಳಿಗೆ ಸಹ ಅನುಕೂಲವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry