ಭಾನುವಾರ, ಏಪ್ರಿಲ್ 18, 2021
29 °C

ಕೆನಡಾದಲ್ಲಿ ಬಂಡವಾಳ ಹೂಡಲು ಗುಜರಾತ್ ಸರ್ಕಾರದ ಆಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೊರಾಂಟೊ (ಪಿಟಿಐ): ಗುಜರಾತ್ ಸರ್ಕಾರ ಮತ್ತು ಕೆಲವು ಭಾರತೀಯ ಕಂಪೆನಿಗಳು ಕೆನಡಾದಲ್ಲಿ ದ್ರವೀಕೃತ ನೈಸರ್ಗಿಕ ಅಡುಗೆ ಅನಿಲ (ಎಲ್‌ಎನ್‌ಜಿ) ರಫ್ತು ಟರ್ಮಿನಲ್ ನಿರ್ಮಾಣದಲ್ಲಿ ಬಂಡವಾಳ ಹೂಡಲು ಉತ್ಸಾಹ ತೋರಿಸಿವೆ. ಕೆನಡಾ ಸರ್ಕಾರವು ಭಾರತಕ್ಕೆ ಎಲ್‌ಎನ್‌ಜಿ ರಫ್ತು ಮಾಡಲು ಉದ್ದೇಶಿಸಿದ್ದರೆ ಗುಜರಾತ್ ಸರ್ಕಾರವು ಬಂಡವಾಳ ತೊಡಗಿಸಲು ಸಿದ್ಧವಾಗಿದೆ ಎಂದು ಗುಜರಾತ್‌ನ ಇಂಧನ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ಜೆ. ಪಾಂಡಿಯನ್ ತಿಳಿಸಿದ್ದಾರೆ.ಇಂಡೊ- ಕೆನಡಾ ವಾಣಿಜ್ಯೋದ್ಯಮಿಗಳ ಸಂಘವು ಏರ್ಪಡಿದ್ದ ಸತ್ಕಾರ ಕೂಟದಲ್ಲಿ ಮಾತನಾಡುತ್ತಿದ್ದ ಅವರು, ತಮ್ಮಂದಿಗೆ ಬಂದಿರುವ ಭಾರತೀಯ ವ್ಯಾಪಾರಿಗಳ ನಿಯೋಗದ ಸದಸ್ಯರು ಸಹ ಬಂಡವಾಳ ಹೂಡಲು ಆಸಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.2013ರ ಜನವರಿಯಲ್ಲಿ ಗಾಂಧಿನಗರದಲ್ಲಿ ನಡೆಯುವ ಗುಜರಾತ್ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕೆನಡಾ ವಾಣಿಜ್ಯೋದ್ಯಮಿಗಳಿಗೆ ಆಹ್ವಾನ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಇಂಡೊ-ಕೆನಡಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ನವಲ್ ಬಜಾಜ್ ಅವರು, ಗಾಂಧಿನಗರದ ಜಾಗತಿಕ ವ್ಯಾಪಾರ ಶ್ರಂಗಸಭೆಗೆ ತಮ್ಮ ನೇತೃತ್ವದ ವಾಣಿಜ್ಯೋದ್ಯಮಿಗಳ ನಿಯೋಗವು ಭಾಗವಹಿಸಲಿದೆ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.