ಶುಕ್ರವಾರ, ನವೆಂಬರ್ 15, 2019
21 °C

ಕೆನಡಾ: ಭಾರತೀಯರಿಗೆ ಹೊಸ ವೀಸಾ ನೀತಿ

Published:
Updated:

ಟೊರಾಂಟೊ, (ಪಿಟಿಐ): ಭಾರತೀಯರಿಗೆ ತನ್ನ ದೇಶದಲ್ಲಿ ನೆಲೆಸಲು ರಿಯಾಯತಿ ನೀಡಿ ಹೊಸ ವೀಸಾ ನೀತಿಯನ್ನು ಜಾರಿಗೆ ತರುವುದಾಗಿ ಕೆನಡಾ ಪ್ರಕಟಿಸಿದೆ.ಕೆನಡಾಕ್ಕೆ ಪದೇ ಪದೇ ಭೇಟಿ ನೀಡುವ ಭಾರತೀಯರ ಅನುಕೂಲದ ಉದ್ದೇಶದಿಂದ ಹೊಸ ವೀಸಾ ಪದ್ಧತಿ ಜಾರಿಗೆ ತರಲಾಗಿದೆ ಎಂದು ಸಚಿವ ಎಡ್ವರ್ಡ್ ಫಾಸ್ಟ್ ಅವರು ತಿಳಿಸಿದರು.ಶುಕ್ರವಾರ ಇಲ್ಲಿ ಆರಂಭವಾದ ಎರಡು ದಿನಗಳ ಪ್ರವಾಸಿ ಭಾರತೀಯ ದಿವಸ ಕೆನಡಾ-2011 ಸಮಾವೇಶದಲ್ಲಿ ಪಾಳ್ಗೊಳ್ಳಲು ಆಗಮಿಸಿದ ಭಾರತೀಯ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ.ವೀಸಾದ ಕಾಲಾವಧಿ ಸಂಪೂರ್ಣ ಹತ್ತು ವರ್ಷಗಳಾಗಿದ್ದು ಪಾಸ್‌ಪೋರ್ಟ್ ಕಾಲಾವಧಿ ಜಾರಿಯಲ್ಲಿರುವರೆಗೂ ಅದು ಚಾಲನೆಯಲ್ಲಿರುತ್ತದೆ ಎಂದು ಹೇಳಿದ್ದಾರೆ. ಭಾರತದೊಂದಿಗೆ ವ್ಯಾಪಾರ, ವಹಿವಾಟು ವೃದ್ಧಿಯ ಉದ್ದೇಶದಿಂದ ಕೆನಡಾ ಈ ನೂತನ ಯೋಜನೆ ಪ್ರಕಟಿಸಿದೆ.

ಪ್ರತಿಕ್ರಿಯಿಸಿ (+)