ಕೆನಡಿಯನ್ ಬಹುಸಂಸ್ಕೃತಿ ಮಿಲನ

7

ಕೆನಡಿಯನ್ ಬಹುಸಂಸ್ಕೃತಿ ಮಿಲನ

Published:
Updated:

ಯಲಹಂಕ ಸಮೀಪದ ಮಂಚನಹಳ್ಳಿಯಲ್ಲಿರುವ ಕೆನಡಿಯನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ ವಾರ್ಷಿಕ ಬಹುಸಂಸ್ಕೃತಿ ದಿನವನ್ನು ಆಚರಿಸಲಾಯಿತು.ಪ್ರಚಂಚದ ನಾನಾ ಪ್ರದೇಶಗಳ ಸಾಂಸ್ಕೃತಿಕ ಮಹತ್ವ ಸಾರುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಅಭಿನಯಿಸಿದರು.37 ರಾಷ್ಟ್ರಗಳ ಮಕ್ಕಳು ಬಹುಸಂಸ್ಕೃತಿ ಮಿಲನ ದಿನದಲ್ಲಿ ಸಾಂಸ್ಕೃತಿಕ ರಸಧಾರೆ ಹರಿಸಿದರು.ಜಪಾನಿನ ಸಾಂಪ್ರದಾಯಿಕ ನೃತ್ಯ, ಕೊರಿಯನ್ ಆರ್ಕೆಸ್ಟ್ರಾ, ಇಂಡೊನೇಷ್ಯಾ ಬಲ್ಲಾಡ್ಸ್, ಅಮೆರಿಕನ್ ರಾಕ್ ಮ್ಯೂಸಿಕ್, ಪೂರ್ವ ದೇಶಗಳಿಂದ ಪಶ್ಚಿಮ ದೇಶಗಳ ರಾಷ್ಟ್ರಗೀತೆಗಳು ಹಾಗೂ ಬಾಲಿವುಡ್ ಗೀತೆಗಳನ್ನು ಹಾಡುವ ಮೂಲಕ ಬಹುಸಂಸ್ಕೃತಿ ಮಹತ್ವ ಸಾರಿದರು.ವಿವಿಧ ದೇಶಗಳ ಮಕ್ಕಳು ತಮ್ಮ ತಮ್ಮ ರಾಷ್ಟ್ರಧ್ವಜಗಳನ್ನು ಹಿಡಿದು ಭಾವೈಕ್ಯತೆ ಸಾರುವ ಗೀತೆಗಳಿಗೆ ನೃತ್ಯ ಮಾಡಿ ಸಮಾರಂಭಕ್ಕೆ ವಿಶಿಷ್ಟ ಮೆರುಗು ನೀಡಿದರು.ಬಹು ಸಂಸ್ಕೃತಿ ಮಿಲನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಮೇಲೆ ಪ್ರೀತಿ ಹೆಚ್ಚಾಗುವಂತೆ ಮಾಡುತ್ತದೆ ಹಾಗೂ ನಾನಾ ದೇಶಗಳ ಸಂಸ್ಕೃತಿ ಬಗ್ಗೆ ಅರಿವು ಮೂಡುತ್ತದೆ. ಜೊತೆಗೆ ಜಾನಪದ ಸೊಗಡು ಪಸರಿಸುತ್ತದೆ. ಇದರಿಂದಾಗಿ ಭೌತಿಕ ಬೆಳವಣಿಗೆ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಕೆನಡಿಯನ್ ಅಂತರರಾಷ್ಟ್ರೀಯ ಶಾಲೆಯ ಕಾರ್ಯನಿರ್ವಾಹಕ ನಿರ್ದೇಶಕಿ ಶ್ವೇತಾ ಶಾಸ್ತ್ರಿ.ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲದೇ ದೇಶ ವಿದೇಶಗಳ ಆಹಾರವು ದಿನವನ್ನು ಮತ್ತಷ್ಟು ರಂಗುತುಂಬಿತ್ತು. ಕೆನಡಿಯನ್ ಅಂತರರಾಷ್ಟ್ರೀಯ ಶಾಲೆಯು ಕೆಲ ಸ್ವಯಂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ನೀಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕೈಂಕರ್ಯ ಮಾಡುತ್ತಿದೆ. ಪೋಷಕರು ಬಹುಸಂಸ್ಕೃತಿ ದಿನದ ಸಂಭ್ರಮ ಕಂಡು ಕಣ್ತುಂಬಿಕೊಂಡರು.ಅಂತರರಾಷ್ಟ್ರೀಯ ಮಟ್ಟದ ಕೆನಡಿಯನ್ ಶಾಲೆಯು ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ವಿದೇಶಗಳಲ್ಲಿ ತರಬೇತಿ ಪಡೆದ ನುರಿತ ಶಿಕ್ಷಕರನ್ನು ಒಳಗೊಂಡಿದೆ. ಪ್ರತಿ ವರ್ಷ ಬಹುಸಂಸ್ಕೃತಿ ದಿನವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನೋಭಾವ ಬೆಳೆಸುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry