ಶನಿವಾರ, ಡಿಸೆಂಬರ್ 7, 2019
24 °C

ಕೆನಡಿಯನ್ ಮಕ್ಕಳ ವಾಕಥಾನ್

Published:
Updated:
ಕೆನಡಿಯನ್ ಮಕ್ಕಳ ವಾಕಥಾನ್

ಶಾಲಾ ವಾರ್ಷಿಕೋತ್ಸವ ಅಂದರೆ ಅಲ್ಲಿ ಫನ್ ಫೇರ್, ಮೋಜು, ಮಸ್ತಿ, ಕೇಕೆ ಎಲ್ಲ ಇರುತ್ತದೆ ಅಲ್ಲವೆ...ಆದರೆ ಇದೆಲ್ಲಕ್ಕಿಂತ ಭಿನ್ನವಾಗಿ ಯಲಹಂಕದ ಕೆನಡಿಯನ್ ಇಂಟರ್‌ನ್ಯಾಷನಲ್ ಶಾಲೆಯ ಮಕ್ಕಳು ಶಾಲಾ ವಾರ್ಷಿಕೋತ್ಸವವನ್ನು ಆಚರಿಸಿದರು.ಅಂದು ರಸ್ತೆಯಲ್ಲಿ ಎತ್ತ ನೋಡಿದರೂ ಮಂಜು ಕವಿದ ವಾತವಾರಣ.  ಪ್ರಪಂಚದ ವಿವಿಧ ಕಡೆಯಿಂದ ಬಂದು ಯಲಹಂಕದ ಕೆನಡಿಯನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಈ  ಮಕ್ಕಳು ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಧ್ವಜದ ಬಣ್ಣಗಳಿರುವ ವಸ್ತ್ರ ಧರಿಸಿ ನಿಧಿ ಸಂಗ್ರಹಿಸುತ್ತಿದ್ದರು..ಮಕ್ಕಳಿಗೆ ನಡಿಗೆಯ ಕ್ರಮ ಹೇಳಿಕೊಡಲಾಯಿತು. ನಡತೆಯಲ್ಲಿ ಸಹಾಯ ಮನೋಭಾವವೂ ಬೆಳೆಸುವಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಮ್ಯೂನಿಟಿ ಅಡ್ವೈಸರ್ ಪ್ರಿಯಾ ಆನಂದ್ ಹೇಳಿದರು.ಒಂದರಿಂದ ಐದನೇ ತರಗತಿಯಲ್ಲಿ ಓದುತ್ತಿರುವ ಚಿಣ್ಣರು  ಮದರ್ ತೆರೆಸಾ ಮಿಷಿನರಿಯಲ್ಲಿರುವ ನಿರ್ಗತಿಕ ಮಕ್ಕಳಿಗಾಗಿ ಹಣ ಸಂಗ್ರಹಿಸಿದರು. ಇಂದಿರಾಗಾಂಧಿ ಇಂಟರ್‌ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಶ್ರೀಲಂಕಾದ ನಿರ್ಗತಿಕ ಮೂರುನೂರು ಮಕ್ಕಳಿಗಾಗಿ ಆರರಿಂದ ಎಂಟನೇ ತರಗತಿಯ ಮಕ್ಕಳು ನಿಧಿ ಸಂಗ್ರಹ ಮಾಡಿದರು.ನಿರ್ಗತಿಕರಿಗಾಗಿ  ಮಾಡುತ್ತಿರುವ ಗೃಹ ನಿರ್ಮಾಣಕ್ಕಾಗಿ ಒಂಬತ್ತರಿಂದ ಹನ್ನೆರಡನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿದರು.ಹಣ ಸಂಗ್ರಹದಿಂದ ಸಮಾಜಕ್ಕೆ ಏನಾದರೂ ಸಹಾಯ ಮಾಡಬೇಕು ಎಂಬುದು ಅರಿವಾಯಿತು. ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿತು ಎಂದು ಹನ್ನೆರಡನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ನಿಧಿ ಗೋಪಾಲನ್ ಹೇಳಿದರು.ಈ ರೀತಿಯ ಕೆಲಸದಲ್ಲಿ ಮಕ್ಕಳು ಅತಿ ಹೆಚ್ಚು ಸಂತೋಷದಿಂದ ಭಾಗವಹಿಸಿದರು ಎಂದು ಕೆನಡಿಯನ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಶ್ವೇತಾ ಶಾಸ್ತ್ರಿ ಸಹ ತಮ್ಮ ಧ್ವನಿಗೂಡಿಸಿದರು. 

ಪ್ರತಿಕ್ರಿಯಿಸಿ (+)