ಕೆನರಾ ಬ್ಯಾಂಕ್‌ನಿಂದ ಚಿಕಿತ್ಸಾ ಸೇವೆ ಪ್ರಾರಂಭ

7

ಕೆನರಾ ಬ್ಯಾಂಕ್‌ನಿಂದ ಚಿಕಿತ್ಸಾ ಸೇವೆ ಪ್ರಾರಂಭ

Published:
Updated:

ಚಿಕ್ಕಬಳ್ಳಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಸಮಾಜಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಸತ್ಯಸಾಯಿ ವಿದ್ಯಾ ಕೇಂದ್ರದ ಪ್ರಾಂಶುಪಾಲ ಎಂ.ಎಸ್.ಸತ್ಯನಾರಾಯಣ ತಿಳಿಸಿದರು.ತಾಲ್ಲೂಕಿನ ಮೈಲಪ್ಪನಹಳ್ಳಿಯ ಚನ್ನರಾಯಸ್ವಾಮಿ-ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕೆನರಾ ಬ್ಯಾಂಕ್ ವತಿಯಿಂದ ನಡೆದ ಗ್ರಾಮೀಣ ಆರೋಗ್ಯ ಚಿಕಿತ್ಸಾ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭ ಮತ್ತು ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೆನರಾ ಬ್ಯಾಂಕ್ ಬೆಂಗಳೂರು ಗ್ರಾಮಾಂತರ ವೃತ್ತ ಕಚೇರಿಯ ಉಪಪ್ರಧಾನ ವ್ಯಸ್ಥಾಪಕ ರವೀಂದ್ರ ಭಂಡಾರಿ, ಪ್ರತಿ ದಿನ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಕೆನರಾ ಬ್ಯಾಂಕ್ ವಿವಿಧ ಸಾಮಾಜಿಕ ಕಾರ್ಯಗಳನ್ನು ಸಹ ಕೈಗೆತ್ತಿಕೊಳ್ಳುತ್ತಿದೆ ಎಂದರು.ಶುಭೋದಯ ಕಲಾ ತಂಡದ ಸದಸ್ಯರಾದ ವೈ.ನಾರಾಯಣ, ವೈ.ಆನಂದ, ಮುನಿರಾಜು ಮತ್ತು ಜೀವಿಕಾ ಸಂಘಟನೆಯ ರತ್ನಮ್ಮ ಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರಿಗೆ ಚೆಕ್‌ಗಳನ್ನು ವಿತರಿಸಲಾಯಿತು. ಸಿಎಸ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಿ.ಆರ್.ರಾವ್, ಕೆನರಾ ಬ್ಯಾಂಕ್ ನಗರ ಶಾಖಾ ವ್ಯವಸ್ಥಾಪಕ ಆರ್.ಬಿ.ಸಂಜೀವಪ್ಪ,ಡಾ. ಕೃಷ್ಣಮೂರ್ತಿ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry