ಕೆನರಾ ಬ್ಯಾಂಕ್ ಉಳಿತಾಯ ಖಾತೆ ಅಭಿಯಾನ

7

ಕೆನರಾ ಬ್ಯಾಂಕ್ ಉಳಿತಾಯ ಖಾತೆ ಅಭಿಯಾನ

Published:
Updated:

ತುಮಕೂರು: ಕೆನರಾ ಬ್ಯಾಂಕ್ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಖಾತೆದಾರರಿಗೆ ಅತಿ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ ಎಂದು ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಯೋಜನಾ ಮತ್ತು ಅಭಿವೃದ್ಧಿ ವಿಭಾಗದ ಮಹಾಪ್ರಬಂಧಕ ಪಿ.ಕೆ. ತ್ರಿಪಾಠಿ ಭಾನುವಾರ ಇಲ್ಲಿ ಹೇಳಿದರು.

 

ನಗರದ ಜಯನಗರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಮತ್ತು ಚಾಲ್ತಿ ಖಾತೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ಹೆಚ್ಚುಹೆಚ್ಚು ತೆರೆಯುವಂತೆ ಆರ್‌ಬಿಐ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನವಿದೆ. ಠೇವಣಿ ಸಂಗ್ರಹಕ್ಕಿಂತ ಈ ರೀತಿ ನಿರಂತರ ಹಣದ ವ್ಯವಹಾರ ನಡೆಸುವ ಗ್ರಾಹಕರನ್ನು ಉತ್ತೇಜಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.ಬೆಂಗಳೂರು ವೃತ್ತ ಕಚೇರಿ ಮಹಾ ಪ್ರಬಂಧಕ ರವೀಂದ್ರ ಭಂಡಾರಿ ಮಾತನಾಡಿ, ಈಗಾಗಲೇ ಉಳಿತಾಯ, ಚಾಲ್ತಿ ಖಾತೆ ಅಭಿಯಾನದ ಮೂಲಕ ಹೊಸ ಖಾತೆಗಳನ್ನು ತೆರೆದು ಎರಡೂವರೆ ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಇನ್ನೂ 50 ಲಕ್ಷ ರೂಪಾಯಿ ಸಂಗ್ರಹದ ನಿರೀಕ್ಷೆಯಿದೆ ಎಂದರು.ಇಲ್ಲಿವರೆಗೂ ಬ್ಯಾಂಕ್‌ನ ಪ್ರಬಂಧಕರು ಮತ್ತು ಗ್ರಾಹಕರ ಮಧ್ಯೆ ಮಾತ್ರವೇ ಸಂವಹನ ನಡೆಯುತ್ತಿತ್ತು. ಅಭಿಯಾನದಿಂದಾಗಿ ಬ್ಯಾಂಖ್‌ನ ಎಲ್ಲ ಸಿಬ್ಬಂದಿಗೂ ಸಾರ್ವಜನಿಕರ ಬೇಕು-ಬೇಡಗಳು ನೇರವಾಗಿ ಅರಿವಿಗೆ ಬರುತ್ತಿದೆ. ಪರಿಣಾಮಕಾರಿ ಸೇವೆಗೆ ಇದು ಸಹಕಾರಿಯಾಗಿದೆ ಎಂದರು.ಮುಖ್ಯ ಪ್ರಬಂಧಕ ನಾಗರಾಜ್ ಸಿಂಗ್ ಮಾತನಾಡಿದರು. ತುಮಕೂರಿ ನಲ್ಲಿರುವ ಕೆನರಾ ಬ್ಯಾಂಕ್‌ನ ವಿವಿಧ ಶಾಖೆಗಳ ಪ್ರಬಂಧಕರು, ಸಿಬ್ಬಂದಿ ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry