ಭಾನುವಾರ, ಮೇ 9, 2021
26 °C

ಕೆನರಾ ಬ್ಯಾಂಕ್: ಡೆಬಿಟ್ ಕಾರ್ಡ್ ಬಳಕೆಗೆ ಶುಲ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಟಿಎಂ ಡೆಬಿಟ್ ಕಾರ್ಡ್ ಬಳಕೆಗೆ ವಾರ್ಷಿಕ ರೂ.112 ಶುಲ್ಕ ವಿಧಿಸುವುದಾಗಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಹೇಳಿದೆ.ಜುಲೈ 1ರಿಂದ ಪರಿಷ್ಕೃತ ದರ  ಜಾರಿಗೆ ಬರಲಿದೆ. ಹೊಸ ಕಾರ್ಡ್ ಮತ್ತು ಹಳೆಯ ಕಾರ್ಡ್ ನವೀಕರಣಕ್ಕೆ ಇನ್ನು ಮುಂದೆ ರೂ.100 ಶುಲ್ಕ ವಿಧಿಸಲಾಗುತ್ತದೆ. ಇದರ ಜತೆಗೆ ಸೇವಾ ಶುಲ್ಕದ ರೂಪದಲ್ಲಿ ರೂ.12 ಪಡೆಯಲಾಗುತ್ತದೆ. ನಂತರ ಪ್ರತಿ ವರ್ಷವೂ ಕಾರ್ಡ್ ಬಳಕೆಗೆ ರೂ.112ರಂತೆ ಶುಲ್ಕ ವಿಧಿಸಲಾಗುವುದು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.ಆದರೆ, ಕೆನರಾ ಕಿರು ಉಳಿತಾಯ ಖಾತೆ, ಪ್ರಾಥಮಿಕ ಬ್ಯಾಂಕ್ ಖಾತೆ ಮತ್ತು ವಿತ್ತೀಯ ಸೇರ್ಪಡೆ ಖಾತೆಗಳಿಗೆ ಈ ಶುಲ್ಕ ಅನ್ವಯಿುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.