ಶುಕ್ರವಾರ, ನವೆಂಬರ್ 15, 2019
20 °C

ಕೆನ್‌ಬ್ರಿಜ್ ಶಾಲೆ ಉದ್ಘಾಟನೆ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸರ್ವಾಂಗೀಣ ಶಿಕ್ಷಣದ ಅಭಿವೃದ್ಧಿಯನ್ನು ಉದ್ದೇಶವಿಟ್ಟುಕೊಂಡು ಎವರಾನ ಎಜ್ಯುಕೇಷನ್ ಲಿಮಿಟೆಡ್ ಗುಲ್ಬರ್ಗದ ನೃಪತುಂಗ ಕಾಲೊನಿಯಲ್ಲಿ ಬುಧವಾರ ಔಪಚಾರಿಕವಾಗಿ ಕೆನ್‌ಬ್ರಿಜ್ ಶಾಲೆಯನ್ನು ಆರಂಭಿಸಿತು. ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ನೂತನ ಶಾಲೆಯನ್ನು ಉದ್ಘಾಟಿಸಿದರು.ಎವರಾನ್ ಎಜುಕೇಷನ್ ಲಿಮಿಟೆಡ್‌ನ ಸಹ ಸ್ಥಾಪಕಿ ಸುಷಾ ಜಾನ್ ಮಾತನಾಡಿ, `ಕರ್ನಾಟಕದ ಯಾವುದೇ ಭಾಗದಲ್ಲಿ ಶಾಲೆಗಳನ್ನು ಆರಂಭಿಸುತ್ತಿರುವುದಕ್ಕೆ ನಮಗೆಲ್ಲ ಬಹಳ ಸಂತೋಷ. ಕೆನ್‌ಬ್ರಿಜ್ ಶಾಲೆಯಲ್ಲಿ ಕಲಿಯುವುದು ಒಂದು ವಿಶಿಷ್ಟ ಅನುಭವ. ಬರೀ ಪಾಠಗಳಿಗಷ್ಟೆ ಅಲ್ಲದೆ, ಕ್ರೀಡೆ ಮತ್ತಿತರ ಪಠ್ಯೇತರ  ಚಟುವಟಿಕೆಗಳಿಗೂ ಸಮಾನವಾದ ಗಮನ ಕೊಡುತ್ತೇವೆ. ಹೀಗಾಗಿ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಇದು ಪೂರಕವಾಗಿದೆ~ ಎಂದರು.ಕೆನ್‌ಬ್ರಿಜ್ ಶಾಲೆಗಳ ಮುಖ್ಯ ಸಲಹೆಗಾರ ಡಾ. ವಸಂತಿ ವಾಸುದೇವ್ ಮತ್ತು ಶಾಲೆಗೆ ಭೂಮಿ ಕೊಟ್ಟಿರುವ ಹಾಗೂ ಹೋಮಿ ಇರಾನಿ ಎಜುಕೇಷನಲ್ ಟ್ರಸ್ಟ್‌ನ ನೆವೆಲ್ಲೆ ಇರಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)