ಮಂಗಳವಾರ, ಮೇ 18, 2021
22 °C

ಕೆಪಿಎಸ್ಸಿ ಅಕ್ರಮ: ಸಿಐಡಿ ವರದಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೆಜೆಟೆಡ್ ಪ್ರೊಬೆಷನರ್ಸ್‌ ಹುದ್ದೆಯ (ಗ್ರೂಪ್ ಎ ಮತ್ತು ಬಿ) ನೇಮಕಾತಿಗೆ ಕರ್ನಾಟಕ ಲೋಕ ಸೇವಾ ಆಯೋಗವು 1998, 1999 ಹಾಗೂ 2004ರಲ್ಲಿ ನಡೆಸಿರುವ ಆಯ್ಕೆ ಪ್ರಕ್ರಿಯೆಯಲ್ಲಿನ ಅವ್ಯವಹಾರದ ಕುರಿತ ತನಿಖಾ ವರದಿಯನ್ನು ಸಿಐಡಿ ಪೊಲೀಸರು ಹೈಕೋರ್ಟ್‌ಗೆ ನೀಡುವ ಬದಲು ಸರ್ಕಾರದ ಮುಖ್ಯ
ಶಾಸಕ ಜೀವರಾಜ್‌ಗೆ ನೋಟಿಸ್ ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವುದಾಗಿ ದೂರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ  ಶಾಸಕ ಡಿ.ಎನ್. ಜೀವರಾಜ್ ಅವರಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ಪತ್ರಕರ್ತೆ ಕೆ.ಜಿ.ನಾಗಲಕ್ಷ್ಮಿ ಬಾಯಿ ಸಲ್ಲಿಸಿರುವ ಅರ್ಜಿ ಇದಾಗಿದೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಸದಾನಂದಗೌಡರು 50/80 ಅಡಿ ನಿವೇಶನ ಪಡೆದುಕೊಂಡಿದ್ದಾರೆ. ಇಲ್ಲಿ ನಿಯಮ ಉಲ್ಲಂಘಿಸಿ 5ನೇ ಮಹಡಿ ನಿರ್ಮಾಣ ಮಾಡಿದ್ದಾರೆ ಎನ್ನುವುದು ಅವರ ವಾದ. ಪ್ರಕರಣದಲ್ಲಿ ಜೀವರಾಜ್ ಅವರೂ ಭಾಗಿಯಾಗಿದ್ದು, ಅವರನ್ನೂ ಪ್ರತಿವಾದಿಯಾಗಿಸಬೇಕು ಎಂದು ಕೋರಿ ನಾಗಲಕ್ಷ್ಮಿ ಅವರು ಬುಧವಾರ ಮಧ್ಯಂತರ ಮನವಿ (ಐ.ಎ) ಸಲ್ಲಿಸಿದ್ದರು. ಅದನ್ನು ಮಾನ್ಯ ಮಾಡಿದ ಕೋರ್ಟ್, ನೋಟಿಸ್ ಜಾರಿ ಮಾಡಿದೆ.

ಕಾರ್ಯದರ್ಶಿಗಳಿಗೆ ನೀಡಿದ್ದರಿಂದ ಹೈಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.ಇದನ್ನು ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವುದು ಯಾವ ಕಾರಣಕ್ಕೆ ಎಂಬುದರ ಬಗ್ಗೆ ಸರ್ಕಾರದ ಪರ ವಕೀಲರು ಸಮಜಾಯಿಷಿ ನೀಡಿದರು. ಆದರೆ ಅದನ್ನು ಒಪ್ಪದ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ನೇತೃತ್ವದ ವಿಭಾಗೀಯ ಪೀಠವು, `ವರದಿಯನ್ನು ನ್ಯಾಯಾಲಯಕ್ಕೆ ನೀಡಬೇಕು ಎಂದು ಈ ಹಿಂದೆಯೇ ಕೋರ್ಟ್ ಆದೇಶ ಹೊರಡಿಸಿದ್ದರೂ ಯಾಕೀ ಮುಚ್ಚುಮರೆ? ನಮಗೆ ವರದಿ ನೀಡಲು ಮೀನಮೇಷ ಎಣಿಸುವುದು ಏಕೆ? ಸಂದೇಹ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಕಾರಣವೇನು? ಹೀಗಾದರೆ ನಿಮ್ಮ ಸಿಐಡಿ ತನಿಖಾಧಿಕಾರಿಗಳು ತೊಂದರೆಗೆ ಸಿಲುಕುತ್ತಾರೆ~ ಎಂದು ಎಚ್ಚರಿಸಿದರು.ಮುಂದಿನ ವಿಚಾರಣೆ ವೇಳೆ ವರದಿಯನ್ನು ನೀಡುವಂತೆ ಸರ್ಕಾರಕ್ಕೆ ಅವರು ನಿರ್ದೇಶಿಸಿದರು. ಅದೇ ರೀತಿ ಅವ್ಯವಹಾರದ ಕುರಿತ ಕೆಲವು ದಾಖಲೆಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವರದಿಯನ್ನೂ ನೀಡುವಂತೆ ನ್ಯಾಯಮೂರ್ತಿಗಳು ಸೂಚಿಸಿದರು.ಅವ್ಯವಹಾರದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಸರ್ಕಾರದ ಪರ ವಕೀಲರು ವಿವರಿಸಿದರು. ಆರೋಪಿಗಳ ಹೆಸರನ್ನು ಓದಲು ಅವರು ಮುಂದಾದರು. ಆಗ ನ್ಯಾಯಮೂರ್ತಿಗಳು, `ಬೇಡ, ದೇವರ ಹೆಸರು ಬೇಕಿದ್ದರೆ ಹೇಳಿ. ಇಲ್ಲಿ ಇಂತಹ ಪ್ರಕರಣಗಳ ಆರೋಪಿಗಳ ಹೆಸರು ಹೇಳಿ ನ್ಯಾಯಾಲಯದ ಆವರಣ ಅಪವಿತ್ರ ಮಾಡಬೇಡಿ~ ಎಂದು ಚಟಾಕಿ ಹಾರಿಸಿ ವಿಚಾರಣೆ ಮುಂದೂಡಿದರು.ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಕಲೀಲ್ ಅಹಮ್ಮದ್ ಹಾಗೂ ಇತರ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.`ಸರ್ಕಾರದಂತೆ ನಪುಂಸಕವಲ್ಲ~

ಪದವೀಧರ ಕ್ಷೇತ್ರದ ಚುನಾವಣೆಗೆ ಯಾವುದೇ ಭಾಗಗಳಲ್ಲಿಯಾದರೂ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಅರ್ಜಿದಾರರೊಬ್ಬರು ಮಾಡಿಕೊಂಡ ಮನವಿಯನ್ನು ಮಾನ್ಯ ಮಾಡಲು ಹೈಕೋರ್ಟ್ ಬುಧವಾರ ನಿರಾಕರಿಸಿತು.ಅಶ್ವಿನ್ ಮಹೇಶ್ ಅರ್ಜಿ ಸಲ್ಲಿಸಿದ್ದಾರೆ. ಈಗ ಇರುವ ಪದ್ಧತಿ ಪ್ರಕಾರ, ಅರ್ಜಿದಾರರು ಯಾವ ಭಾಗದಲ್ಲಿ ವಾಸವಾಗಿರುತ್ತಾರೆಯೋ, ಆ ಕ್ಷೇತ್ರದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಇದರಿಂದ ಜನರಿಗೆ ಬಹಳ ಕಷ್ಟವಾಗುತ್ತಿದೆ. ಇದರ ತಡೆಗೆ ಕೋರ್ಟ್ ಆದೇಶಿಸಬೇಕು ಎಂದು  ಮನವಿ ಮಾಡಿಕೊಳ್ಳಲಾಗಿದೆ.

 

ಕೋರ್ಟ್ ವಿಚಾರಣೆ ಮುಂದೂಡಿ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಅರ್ಜಿದಾರರಿಗೆ ನ್ಯಾಯಮೂರ್ತಿಗಳು ಸೂಚಿಸಿದರು. ಆಗ ಅರ್ಜಿದಾರರು ಆಯೋಗವು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದರು. ಅದಕ್ಕೆ ನ್ಯಾಯಮೂರ್ತಿಗಳು, ಚುನಾವಣಾ ಆಯೋಗವು ಸರ್ಕಾರದಂತೆ ನಪುಂಸಕ ಅಲ್ಲ. ಮನವಿಗೆ ಸ್ಪಂದಿಸುತ್ತದೆ. ಅಲ್ಲಿಯೇ ಹೋಗಿ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.