ಕೆಪಿಎಸ್‌ಸಿಗೆ ಕನ್ನಡದ ಅರಿವು ಬೇಡವೇ?

7

ಕೆಪಿಎಸ್‌ಸಿಗೆ ಕನ್ನಡದ ಅರಿವು ಬೇಡವೇ?

Published:
Updated:

ಕರ್ನಾಟಕ ಲೋಕಸೇವಾ ಆಯೋಗವು  ಎ ಮತ್ತು ಬಿ ಶ್ರೇಣಿಯ 352 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಪೂರ್ವಭಾವಿ ಪರೀಕ್ಷೆಯ ನೂತನ ಪಠ್ಯಕ್ರಮವನ್ನು ಪ್ರಕಟಿಸಿದೆ. ಇದರಲ್ಲಿ 2 ಪತ್ರಿಕೆಗಳಿವೆ. ಎರಡು ಪತ್ರಿಕೆಗಳಲ್ಲಿ  200 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.

 

ದೇಶದ ಹಾಗೂ ರಾಜ್ಯದ ಪ್ರಸಕ್ತ ವಿದ್ಯಮಾನಗಳು, ಇತಿಹಾಸ, ಸಂವಿಧಾನ, ಅರ್ಥಶಾಸ್ತ್ರ, ಮಾನಸಿಕ ಅರ್ಹತೆ ಮತ್ತು ವಿಜ್ಞಾನ ಇವು ನೂತನ ಪಠ್ಯಕ್ರಮದ ವಿಷಯಗಳು. ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡನಾಡು, ನುಡಿ, ಸಾಹಿತ್ಯದ ಬಗ್ಗೆ  ಉದಾಸೀನ ತೋರಲಾಗಿದೆ.ಪೂರ್ವಭಾವಿ ಪಠ್ಯಕ್ರಮದ ವಿಷಯವಾಗಲು ಕನ್ನಡಕ್ಕೆ ಅರ್ಹತೆ ಇಲ್ಲವೆ? ಕನ್ನಡ ನಾಡು, ನುಡಿ, ಸಾಹಿತ್ಯ, ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ  ಏಕೀಕರಣ ಒಳಗೊಂಡಂತೆ ಕನಿಷ್ಠ 50 ಪ್ರಶ್ನೆಗಳನ್ನಾದರೂ ಪಠ್ಯ ಕ್ರಮದಲ್ಲಿ ನಿಗದಿ ಮಾಡಬೇಕು ಎಂದು ಆಗ್ರಹಿಸುತ್ತೇನೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry