ಕೆಪಿಎಸ್‌ಸಿ ಕಾರ್ಯದರ್ಶಿ ಸುಂದರ್‌ ಎತ್ತಂಗಡಿ

7

ಕೆಪಿಎಸ್‌ಸಿ ಕಾರ್ಯದರ್ಶಿ ಸುಂದರ್‌ ಎತ್ತಂಗಡಿ

Published:
Updated:

ಬೆಂಗಳೂರು: ಗೆಜೆಟೆಡ್‌ ಅಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯ ದರ್ಶಿ ಕೆ.ಆರ್‌.ಸುಂದರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.ರಾಜ್ಯ ಸರ್ಕಾರ ಮಂಗಳವಾರ ಕೆಲವು ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಅದರಲ್ಲಿ ಸುಂದರ್‌ ಅವರೂ ಸೇರಿದ್ದಾರೆ.ಅಲ್ಲದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಹೊಸದಾಗಿ ಪರೀಕ್ಷಾ ನಿಯಂತ್ರಕರ ಹುದ್ದೆ ಸೃಷ್ಟಿಸಿದ್ದು, ಆ ಸ್ಥಾನಕ್ಕೆ ಆರ್‌.ವೆಂಕಟೇಶ್‌ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.ಐಎಎಸ್‌: ಕೆ.ಆರ್‌.ಸುಂದರ್‌ – ವ್ಯವಸ್ಥಾಪಕ ನಿರ್ದೇಶಕರು, ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪೆನಿ, ಗುಲ್ಬರ್ಗ. ಮನೋಜ್‌ಕುಮಾರ್‌ ಮೀನಾ – ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ. ಎಂ.ವಿ.ಸಾವಿತ್ರಿ – ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಬೆಂಗಳೂರು. ಸಾವಿತ್ರಿ ಅವರು ಹೆಚ್ಚು ವರಿಯಾಗಿ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ರಿತ್ವಿಕ್‌ರಂಜನ್‌ ಪಾಂಡೆ – ವಿಜಾಪುರ ಜಿಲ್ಲಾಧಿಕಾರಿ. ಶಿವಯೋಗಿ ಸಿ.ಕಳಸದ – ಆಯುಕ್ತರು (ಭೂಸ್ವಾಧೀನ), ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ.ಐಪಿಎಸ್‌: ಭಾಸ್ಕರ್‌ರಾವ್‌ – ಐಜಿಪಿ (ಉತ್ತರ ವಲಯ), ಬೆಳಗಾವಿ. ಕೆ.ಎಸ್‌.ಆರ್‌.ಚರಣ್ ರೆಡ್ಡಿ – ಐಜಿಪಿ (ತರಬೇತಿ), ಬೆಂಗಳೂರು. ಡಾ.ಬಿ.ಎ. ಮಹೇಶ್‌ – ಲೋಕಾಯುಕ್ತ ಎಸ್‌ಪಿ, ಬೆಂಗಳೂರು. ಈಶ್ವರಚಂದ್ರ ವಿದ್ಯಾ ಸಾಗರ – ಸಹಾಯಕ ಐಜಿಪಿ (ಅಪರಾಧ), ಬೆಂಗಳೂರು. ಅಭಿಷೇಕ್‌ ಗೋಯಲ್‌ – ಲೋಕಾಯುಕ್ತ ಎಸ್‌ಪಿ, ಬೆಂಗಳೂರು. ಶಂತನು ಸಿನ್ಹ– ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ದಕ್ಷಿಣ ಕನ್ನಡ. ಇಡಾ ಮಾರ್ಟಿನ್‌ ಮಾರ್‌ಬೇನಿ ಯಂಗ್‌ – ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಬಾಗಲಕೋಟೆ.ಎಸ್‌ಪಿಎಸ್‌: ಕೆ.ಟಿ.ಬಾಲಕೃಷ್ಣ–ಡೆಪ್ಯೂಟಿ ಕಮಾಂಡೆಂಟ್‌ ಜನರಲ್‌, ಗೃಹ ರಕ್ಷಕ ದಳ, ಬೆಂಗಳೂರು. ಎಚ್‌.ಆರ್‌.ಭಗವಾನ್‌ದಾಸ್‌ – ಪ್ರಾಂಶುಪಾಲರು, ಪೊಲೀಸ್‌ ತರಬೇತಿ ಕಾಲೇಜು, ಗುಲ್ಬರ್ಗ. ಎಸ್‌.ರಂಗ ಸ್ವಾಮಿ    ನಾಯಕ್‌ – ಪೊಲೀಸ್‌ ವರಿಷ್ಠಾಧಿಕಾರಿ (ಗುಪ್ತಚರ), ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry