ಕೆಪಿಎಸ್‌ಸಿ: ತನಿಖೆಗೆ ಹೈಕೋರ್ಟ್‌ ಸಮಿತಿ

7

ಕೆಪಿಎಸ್‌ಸಿ: ತನಿಖೆಗೆ ಹೈಕೋರ್ಟ್‌ ಸಮಿತಿ

Published:
Updated:

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ (ಎ ಮತ್ತು ಬಿ ವೃಂದ) ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ 1998, 1999 ಮತ್ತು 2004ರಲ್ಲಿ ನಡೆದ ನೇಮಕಾತಿ ಯಲ್ಲಿನ ಅವ್ಯವಹಾರಗಳ ಕುರಿತು ಸ್ವತಂತ್ರವಾಗಿ ಪರಿಶೀಲಿಸಲು ಹೈಕೋರ್ಟ್‌ ಶುಕ್ರವಾರ ಸಮಿತಿ ಯೊಂದನ್ನು ನೇಮಕ ಮಾಡಿದೆ.ಸರ್ಕಾರ, ಕೆಪಿಎಸ್‌ಸಿ, ಆ ಮೂರು ವರ್ಷ­ಗಳಲ್ಲಿ ನೇಮಕಗೊಂಡ ಅಭ್ಯರ್ಥಿ­ಗಳು ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿರುವ ಅರ್ಜಿದಾರರ ಪ್ರತಿನಿಧಿಗಳು ಸಮಿತಿಯಲ್ಲಿದ್ದಾರೆ.ಇದು 1998, 1999 ಮತ್ತು 2004ರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸ್ವತಂತ್ರವಾಗಿ ಪರಿಶೀಲನೆ ನಡೆಸಿ, ನ. 8ರೊಳಗೆ ಕೋರ್ಟ್‌ಗೆ ವರದಿ ಸಲ್ಲಿಸ ಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯ ಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳ ಗೊಂಡ ವಿಭಾಗೀಯ ಪೀಠ ಆದೇಶಿಸಿದೆ.ಖಲೀಲ್‌ ಅಹಮದ್‌ ಮತ್ತುಇತರರು ಸಲ್ಲಿಸಿರುವ ಸಾರ್ವಜನಿಕಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ‘ಈ ಪ್ರಕರಣಕ್ಕೆ ಸಂಬಂಧಿ­ಸಿ­ದಂತೆ ಯಾವುದೇ ಸಂಗತಿ ಮುಚ್ಚಿಡುವ ಇರಾದೆ ಆಯೋಗಕ್ಕೆ ಇದೆಯೇ?’ ಎಂದು ಪ್ರಶ್ನಿಸಿತು. ‘ಇಲ್ಲ, ನಾವು ಸಾರ್ವಜನಿಕರಿಗೆ ಉತ್ತರದಾಯಿ ಆಗಿದ್ದೇವೆ’ ಎಂಬ ಉತ್ತರ ಆಯೋಗದ ಪರ ಹಿರಿಯ ವಕೀಲ ಪಿ.ಎಸ್‌. ರಾಜಗೋಪಾಲ್‌ ಅವರಿಂದ ಬಂತು.‘ಈ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಎಷ್ಟಿದೆಯೋ, ಕೆಪಿಎಸ್‌ಸಿಯ ಹಿತಾ ಸಕ್ತಿಯೂ ಅಷ್ಟೇ ಪ್ರಮಾಣ ದಲ್ಲಿದೆ. ನೀವು ಈ ಪ್ರಕರಣಕ್ಕೆ ಸಂಬಂಧಿ ಸಿದಂತೆ ಯಾವುದೇ ವಿಚಾರ ಮುಚ್ಚಿಡ ಬೇಡಿ. ನಿಮ್ಮ ಮೇಲೆ ವಿಶ್ವಾಸ ಇಟ್ಟು, ಅಭ್ಯರ್ಥಿ ಗಳು ಪರೀಕ್ಷೆ ಬರೆದರು. ನಿಮ್ಮ ಮೇಲೆ ನಂಬಿಕೆ ಇಟ್ಟು, ಪರೀಕ್ಷಾ ಪ್ರಕ್ರಿಯೆಯನ್ನು ಸರ್ಕಾರ ನಿಮಗೆ ವಹಿಸಿತು. ಆಯೋಗದ ಈಗಿನ ಮಂಡಳಿಯು ಯಾರನ್ನೂ ರಕ್ಷಿಸಬೇಕಾ­ಗಿಲ್ಲ. ತನಿಖೆಗೆ ಸಹಕಾರ ನೀಡಿ’ ಎಂದು ಸೂಚಿಸಿತು. ವಿಚಾರಣೆ ಮುಂದೂಡಲಾಗಿದೆ.ನ್ಯಾಯದತ್ತ ಗಮನ

ಇಡೀ ವ್ಯವಸ್ಥೆಯನ್ನು ಸುಧಾರಿಸಿ­ಬಿಡಬಹುದು ಎಂಬ ವಿಶ್ವಾಸ ನಮಗಿಲ್ಲ. ಆದರೆ ಈ ಪ್ರಕರಣದಲ್ಲಿ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಪ್ರಕರಣ ವನ್ನು ನಾವು ಕೈಬಿಡುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಬೆಳವಣಿಗೆಗಳನ್ನು ಗಮನಿಸುತ್ತಿರು ತ್ತೇವೆ. ಸೂಕ್ತ ಮೇಲ್ವಿಚಾರಣೆ ನಡೆಸುತ್ತಿ­ರುತ್ತೇವೆ.

–ಡಿ.ಎಚ್‌. ವಘೇಲಾ ಮುಖ್ಯ ನ್ಯಾಯಮೂರ್ತಿಸಮಿತಿ ಸದಸ್ಯರು

ವಕೀಲ ರೂಬೆನ್‌ ಜೇಕಬ್‌ (ಕೆಪಿಎಸ್‌ಸಿ ಪ್ರತಿನಿಧಿ), ವಕೀಲ ಆರ್‌. ದೇವದಾಸ್‌ (ಸರ್ಕಾರ), ವಕೀಲ ಕೆ.ಎಂ. ಪ್ರಕಾಶ್‌ (ಆಯ್ಕೆ ಯಾಗಿರುವ ಅಭ್ಯರ್ಥಿ ಗಳ ಪರ), ವಕೀಲರಾದ ವಿಕ್ರಮ ಫಡ್ಕೆ ಮತ್ತು ಬಸವರಾಜ ಪಾಟೀಲ (ಅರ್ಜಿ ದಾರರ ಪರ).

ಇವರಲ್ಲದೆ, ಅರ್ಜಿ ದಾರರ ಪೈಕಿ ಒಬ್ಬರನ್ನು ಸಮಿತಿಗೆ ಸೇರಿಸಿಕೊಳ್ಳಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry