ಕೆಪಿಎಸ್‌ಸಿ ಪರೀಕ್ಷೆ: ಅವಧಿ ವಿಸ್ತರಣೆಗೆ ಮನವಿ

7

ಕೆಪಿಎಸ್‌ಸಿ ಪರೀಕ್ಷೆ: ಅವಧಿ ವಿಸ್ತರಣೆಗೆ ಮನವಿ

Published:
Updated:

ಮೈಸೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 893 ಎಂಜನಿಯರ್‌ಗಳ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನಿಸಿದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.ಈ ಕುರಿತು ಕೆಪಿಎಸ್‌ಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿರುವ ವಿದ್ಯಾರ್ಥಿಗಳು, ಮೇ18ರಂದು ಸಹಾಯಕ ಎಂಜಿನಿಯರ್, ಉಪನ್ಯಾಸಕರು, ಸಿವಿಲ್, ಮೆಕ್ಯಾನಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 

ಅರ್ಜಿ ಸಲ್ಲಿಕೆಗೆ ಜೂ.16 ಕಡೆಯ ದಿನಾಂಕವಾಗಿದೆ. ಆದರೆ ಇದರಿಂದ ಅಂತಿಮ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಲಿದ್ದಾರೆ. ವಿವಿಧ ವಿಷಯಗಳ ಎಂಜಿನಿಯರಿಂಗ್ ಕೋರ್ಸ್‌ಗಳ ಅಂತಿಮ ಪರೀಕ್ಷೆ ಜೂ.8ರಂದು ನಡೆಯಲಿದೆ. ಇದಾದ ನಂತರ ಫಲಿತಾಶ, ಅಂಕಪಟ್ಟಿ ಬರಲು ಹದಿನೈದು ದಿನಗಳ ಕಾಲಾವಕಾಶ ಬೇಕು. ಆದ್ದರಿಂದ ಜುಲೈ ಮೊದಲ ವಾರದ ವರೆಗೆ ಅವಧಿ ವಿಸ್ತರಿಸಿದರೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನುಕೂಲವಾಗಲಿದೆ ಎಂದು ಕೋರಿದ್ದಾರೆ.10 ವರ್ಷಗಳ ನಂತರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅವಕಾಶದಿಂದ ಕಳೆದುಕೊಳ್ಳಲು ಕೆಪಿಎಸ್‌ಸಿ ಅವಕಾಶ ನೀಡಬಾರದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.  ವಿದ್ಯಾರ್ಥಿಗಳೊಂದಿಗೆ ವಕೀಲ ಎಚ್.ಎನ್. ವೆಂಕಟೇಶ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry