ಸೋಮವಾರ, ಜೂನ್ 14, 2021
23 °C

ಕೆಪಿಎಸ್‌ಸಿ: ರಾಜ್ಯಪಾಲರು ಮಧ್ಯಪ್ರವೇಶಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2011ರ ಗೆಜೆಟೆಡ್‌ ಅಧಿಕಾರಿಗಳ  ನೇಮ­ಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರು­ವುದು ಸಿಐಡಿ ತನಿಖೆಯಿಂದ ಬಹಿರಂಗಗೊಂಡಿದೆ. ಭ್ರಷ್ಟಾಚಾರ ನಿರ್ಮೂಲನೆಯೇ ತಮ್ಮ ಸರ್ಕಾರದ ಮೊದಲ ಗುರಿ ಎಂದು ಜನರಿಗೆ ಆಶ್ವಾಸನೆ ನೀಡಿ, ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ,  ಕೆಪಿಎಸ್‌ಸಿಯ  ಭ್ರಷ್ಟ ಸದಸ್ಯರ ಮತ್ತು ಈ ಕುಕೃತ್ಯದಲ್ಲಿ  ಶಾಮೀ­ಲಾಗಿರುವ ಅಭ್ಯರ್ಥಿಗಳ ಮರ್ಜಿಗೆ ಒಳಗಾಗಿದೆ.ಅಕ್ರಮ ನೇಮಕಾತಿಯನ್ನು ರದ್ದುಗೊಳಿಸಿ ಹೊಸ­ದಾಗಿ ನೇಮಕಾತಿ ಅಧಿಸೂಚನೆ ಹೊರಡಿಸುವ ದಿಟ್ಟ ಪ್ರಯತ್ನ ಮಾಡದೆ ಭ್ರಷ್ಟ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಹುನ್ನಾರ ನಡೆಸುತ್ತಿದೆ. ತನ್ಮೂಲಕ, ಅಧಿಕಾರಕ್ಕೆ ಬಂದ ಅರ್ಧ ವರ್ಷದಲ್ಲೇ ತನ್ನ ವಿಶ್ವಾಸಘಾತುಕತನ ಪ್ರದರ್ಶಿಸಿದೆ. ಸರ್ಕಾರದ ಈ ನಡವಳಿಕೆಯಿಂದ ವಿದ್ಯಾವಂತ ಯುವಜನತೆ ಬೇಸತ್ತಿದ್ದಾರೆ.ರಾಜ್ಯ ಸರ್ಕಾರದ ಸಂವಿಧಾನಾತ್ಮಕ ಮುಖ್ಯಸ್ಥ­ರಾಗಿರುವ ರಾಜ್ಯಪಾಲರು ಸಿಐಡಿ ವರದಿಯನ್ನು ಪರಿಶೀಲಿಸಬೇಕು. ಈ ಅಕ್ರಮ ನೇಮಕಾತಿಯನ್ನು ರದ್ದುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಉತ್ತಮ ನಾಗರಿಕ ಸೇವಾ ವರ್ಗವನ್ನು ಸೃಷ್ಟಿಸಬೇಕಾಗಿರುವ ಕೆಪಿಎಸ್‌ಸಿಯು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅದರ ಕೊಳೆಯನ್ನು ಸಂಪೂರ್ಣವಾಗಿ ತೊಳೆದಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆಯ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಂತಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.