ಶನಿವಾರ, ಮೇ 8, 2021
27 °C

ಕೆಪಿಎಸ್‌ಸಿ ಶುದ್ಧಿಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಕೆ.ಪಿ.ಎಸ್.ಸಿ. ಭ್ರಷ್ಟಾಚಾರದ ಮೂಲ ಎಂಬುದು ಎಲ್ಲರಿಗೂ ತಿಳಿದಿದೆ. ಕೆ.ಪಿ.ಎಸ್.ಸಿ. ಸದಸ್ಯರಾಗುವುದೆಂದರೆ ಬಂಪರ್ ಲಾಟರಿ ಹೊಡೆದಂತೆ. ಲಕ್ಷಾಂತರ ರೂಪಾಯಿ ಲಂಚ ನೀಡಿ ಅಧಿಕಾರಿಯಾದವರು, ಜನರನ್ನು ಸುಲಿದು, ಪ್ರಕೃತಿಯನ್ನು ಲೂಟಿ ಮಾಡಿ ಕೋಟ್ಯಂತರ ಗಳಿಸುತ್ತಾರೆ.ಕೆಲವು ದಲ್ಲಾಳಿಗಳು, ಈ ಲಂಚವನ್ನು ನೀಡಲು ಭಾವಿ ಮಾವಂದಿರನ್ನು ಸಿದ್ಧಪಡಿಸುತ್ತಾರೆ. ಆದರೆ ಮದುವೆಯಾದ ನಂತರ, ಈ ಮಾವನ ಮಗಳು, ಗಂಡನಿಗೆ, ಲಂಚ ಪಡೆಯಲು ಪೀಡಿಸುತ್ತಾರೆ. ಏಕೆಂದರೆ, ಭಾವೀ ಅಳಿಯನನ್ನು ಪಡೆಯಲು!!!ಪ್ರಸ್ತುತ ಸರ್ಕಾರ, ನಿಜವಾಗಿ ಭ್ರಷ್ಟಾಚಾರ ಪರ ಇಲ್ಲದಿದ್ದರೆ, ಶುದ್ಧಹಸ್ತದ, ರಾಜಕೀಯೇತರ ವ್ಯಕ್ತಿಗಳನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇಮಕ ಮಾಡಲಿ. ಕಳೆದ ಹಲವಾರು ವರ್ಷಗಳಲ್ಲಿ ಲಂಚ ಪಡೆದವರನ್ನು ಜೈಲಿಗೆ ಹಾಗೂ ಲಂಚ ನೀಡಿ ಅಧಿಕಾರಿಯಾದವರನ್ನು ಮನೆಗೆ ಕಳುಹಿಸಲಿ.

-ಡಾ. ಜೆರಾಲ್ಡ್ ಪಿಂಟೊ, ಉಡುಪಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.