ಕೆಪಿಎಸ್‌ಸಿ ಹಗರಣ: ಸಿಐಡಿ ವರದಿ ಬಹಿರಂಗಕ್ಕೆ ಬಿಕೆಸಿ ಒತ್ತಾಯ

7

ಕೆಪಿಎಸ್‌ಸಿ ಹಗರಣ: ಸಿಐಡಿ ವರದಿ ಬಹಿರಂಗಕ್ಕೆ ಬಿಕೆಸಿ ಒತ್ತಾಯ

Published:
Updated:

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ಭರ್ತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂ­ಧಿ­ಸಿದಂತೆ ಸಿಐಡಿ ನೀಡಿರುವ ವರದಿ­ಯನ್ನು ಬಹಿರಂಗಪಡಿ­ಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.­ಚಂದ್ರಶೇಖರ್‌ ಒತ್ತಾಯಿಸಿದ್ದಾರೆ.ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ಭರ್ತಿಗೆ ನಡೆದಿರುವ ಲಿಖಿತ ಹಾಗೂ ಮೌಖಿಕ ಪರೀಕ್ಷೆಗಳ ಫಲಿತಾಂಶವನ್ನು ತಿರಸ್ಕರಿಸಬೇಕು ಎಂದೂ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.1998, 1999 ಹಾಗೂ 2004ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ಭರ್ತಿಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಸಿಐಡಿ ನೀಡಿರುವ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಮುಖ್ಯಶಿಕ್ಷಕರ ನೇಮಕಾತಿಯಿಂದ ವಂಚಿತರಾಗಿರುವ 61 ಮಂದಿಯ ದೂರನ್ನೂ ಸರ್ಕಾರ ಪರಿಶೀಲಿ­ಸಬೇಕು ಎಂದು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry