ಕೆಪಿಎಸ್‌ಸಿ: 12ರಿಂದ ದಾಖಲೆ ಪರಿಶೀಲನೆ

7

ಕೆಪಿಎಸ್‌ಸಿ: 12ರಿಂದ ದಾಖಲೆ ಪರಿಶೀಲನೆ

Published:
Updated:

ಬೆಂಗಳೂರು: ಸಹಾಯಕರು ಮತ್ತು ಪ್ರಥಮ ದರ್ಜೆ ಸಹಾಯಕರ ನೇಮಕಾತಿಗೆ ರಾಜ್ಯ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ 12 ರಿಂದ 15ರವರೆಗೆ ಅರ್ಹ ಅಭ್ಯರ್ಥಿ ಗಳ ದಾಖಲೆ ಪರಿಶೀಲಿಸಲಿದ್ದು, ಅರ್ಹ ಅಭ್ಯರ್ಥಿಗಳ ವಿವರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ (http://kpsc.kar.nic.in) ಪ್ರಕಟಿಸಲಾಗಿದೆ.ಅರ್ಹ ಅಭ್ಯರ್ಥಿಗಳಿಗೆ ದಾಖಲಾತಿ ಗಳ ಪರಿಶೀಲನೆಗೆ ಹಾಜರಾಗುವಂತೆ ಈಗಾಗಲೇ ಸೂಚನಾ ಪತ್ರ ರವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ನಮೂದಾಗಿದ್ದರೂ ಸೂಚನಾ ಪತ್ರ ತಲುಪದಿದ್ದಲ್ಲಿ, ಅಂಥವರು ಎಲ್ಲ ದಾಖಲೆಗಳ ಮೂಲ ಪ್ರತಿಗಳೊಂದಿಗೆ ಇದೇ 10ರ ನಂತರ ಆಯೋಗವನ್ನು ಸಂಪರ್ಕಿಸಬೇಕು ಎಂದು ಆಯೋಗದ ಸಹಾಯಕ ಕಾರ್ಯದರ್ಶಿ ಎಲ್. ಎಸ್. ಕುಕ್ಕೇನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry