ಕೆ.ಪಿ.ಟಿ.ಸಿ.ಎಲ್ ಅಭಿವೃದ್ಧಿಗೆ ಶ್ರಮಿಸಲು ಕರೆ

7

ಕೆ.ಪಿ.ಟಿ.ಸಿ.ಎಲ್ ಅಭಿವೃದ್ಧಿಗೆ ಶ್ರಮಿಸಲು ಕರೆ

Published:
Updated:

ದೇವನಹಳ್ಳಿ: `ಸತತ ಪರಿಶ್ರಮದ ಜೊತೆಗೆ ಯೂನಿಯನ್ ಬೇಡಿಕೆಯಂತೆ ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯು ಅನೇಕ ವರ್ಷಗಳ ನಂತರ ಶೇ.25 ರಷ್ಟು ವೇತನ ಹೆಚ್ಚಳ ಮಾಡಿ ಜಾರಿಗೊಳಿಸಿದ್ದು ಸಂಸ್ಥೆಯ ಅಭಿವೃದ್ಧಿಗೆ ನೌಕರರೆಲ್ಲರೂ ಶ್ರಮಿಸಬೇಕು~ ಎಂದರು. ಕೆ.ಪಿ.ಟಿ.ಸಿ.ಎಲ್ ಕೇಂದ್ರ ಯೂನಿಯನ್ ಸಮಿತಿ ಉಪಾಧ್ಯಕ್ಷ ರಂಗನಾಥಗೌಡ ತಿಳಿಸಿದರು.ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ತಾಲ್ಲೂಕು ಬೆಸ್ಕಾಂ ಯೂನಿಯನ್‌ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.1977 ರಲ್ಲಿ ಪ್ರಾರಂಭವಾದ ಯೂನಿಯನ್ ಹಂತಹಂತವಾಗಿ ನೌಕರರ ಹಿತದೃಷ್ಟಿ ಗಮನಿಸಿ ಶ್ರಮವಹಿಸುತ್ತಾ ಬಂದಿದೆ. ಅದಕ್ಕೆ ಸಂಸ್ಥೆಯೂ ಸಹಾ ಸ್ಪಂದಿಸುತ್ತಿದೆ ಆದರೆ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ರಾಜಕೀಯ ಒತ್ತಡದ ನಡುವೆ ನೌಕರರು ಇಲಾಖೆಯ ನಿಯಮ ಅಲ್ಲದೇ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ ಸಂಸ್ಥೆಗೆ ಹಾಗೂ ಸಾರ್ವಜನಿಕರ ಕೃತಜ್ಞತೆಗೆ ಪಾತ್ರರಾಗಬೇಕು~ ಎಂದು ತಿಳಿಸಿದರು. ಕೇಂದ್ರ ಸಮಿತಿ ಸಹಕಾರ್ಯದರ್ಶಿ ಲಕ್ಷ್ಮಿಪತಿ ಮಾತನಾಡಿ `ಯಾವುದೇ ಯೂನಿಯನ್ ಬಲಿಷ್ಟಗೊಳ್ಳಬೇಕಾದರೆ ಸಂಘಟನೆಯ ಜೊತೆಗೆ ಸಧೃಢನಾಯಕತ್ವ ಅಗತ್ಯ ಅದೇ ರೀತಿ ಸಂಘದ ಒಗ್ಗಟ್ಟು ಮುಖ್ಯ. ನೌಕರರ ಪ್ರೋತ್ಸಾಹ ಬೆಂಬಲ ಇದ್ದಲ್ಲಿ ಯೂನಿಯನ್ ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರಗತಿ ಹಾಗೂ ಬಲಗೊಳ್ಳಲು ಸಾಧ್ಯ~ ಎಂದರು.`ದೇಶದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಅವಘಡ ರಾಜ್ಯದಲ್ಲಿ ಆಗಿದೆ 1300 ಪ್ರಕರಣಗಳು ದಾಖಲಾಗಿದೆ.

ನೌಕರರ ಸಮನ್ವಯತೆ ನಿರ್ಲಕ್ಷ್ಯ ಮತ್ತು ಭಿನ್ನಾಭಿಪ್ರಾಯಗಳು ಕಾರಣವೆಂಬುದು ಕೆಂದ್ರ ತನಿಖಾ ತಂಡದಿಂದ ತಿಳಿದುಬಂದಿದೆ. ನೌಕರರು ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು.

 ಪ್ರಸಕ್ತ ವಿದ್ಯುತ್ ಬಳಕೆಯಾಗಿರುವ ಬಿಲ್ ಮೊತ್ತ 1600 ಕೋಟಿ ಬಾಕಿ ಇದೆ ವಸೂಲಿ ಮಾಡಲು ನೌಕರರು ಆಸಕ್ತಿವಹಿಸಬೇಕು ನೌಕರರಿಗೆ ಬರಬೇಕಾದ ವೇತನ ಪರಿಷ್ಕರಣೆಯ ಮೊತ್ತ 300 ಕೋಟಿ ಆದರೆ ಇದರ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು~ಎಂದರು.ಗ್ರಾಮೀಣ ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ್ ಮಾತನಾಡಿ, `ಯೂನಿಯನ್‌ಗೆ ನೌಕರರ ಹಿತ ಮುಖ್ಯ ಮಾರ್ಗಧಿಕಾರಿಗಳು ತಾವು ಕೆಲಸ ನಿರ್ವಹಿಸುವ ವೇಳೆ ಸುರಕ್ಷಿತ ಸಾಮಾಗ್ರಿಗಳಲ್ಲಿ ಬಳಸಿ ಅಪಾಯದ ಬಗ್ಗೆ ಎಚ್ಚರವಹಿಸಬೇಕು~ ಎಂದರು.ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಬಲರಾಮ್, ಸ್ಥಳೀಯ ಯುನಿಯನ್ ಕಾರ್ಯದರ್ಶಿ ಬಿ.ಎಂ.ಸ್ವಾಮಿ, ಸಹಾಯಕ ಅಭಿಯಂತರ ಡಾ. ಕ್ಯಾನಾಯ್ಕ ಕೇಂದ್ರ ವಿಭಾಗ ಲೆಕ್ಕಾಧಿಕಾರಿ ಮೋಹನ್ ಇದ್ದರು.ಮದ್ಯ ವ್ಯಸನಿಗಳ ಉಚಿತ ಶಿಬಿರ ಸಮಾರೋಪ

ದೇವನಹಳ್ಳಿ: ತಾಲ್ಲೂಕಿನ ಕನ್ನಮಂಗಲ ಪಾಳ್ಯದಲ್ಲಿರುವ ಮದರ್ ಥೆರೆಸಾ ಆಸ್ಪತ್ರೆ ಮತ್ತು ಆಲ್ಕೊಹಾಲಿಕ್ ಅನಾನಿಮಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕನ್ನಮಂಗಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಕ್ಟೊಬರ್ 22ರಂದು ಮದ್ಯ ವ್ಯಸನಿಗಳ ಉಚಿತ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮದರ್ ಥೆರೆಸಾ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.ಬೆಂಗಳುರು ಬ್ಯಾಪ್ಟಿಸ್ಟ್ ಆಸ್ಪತ್ರೆ ಕಾರ್ಯ ನಿರ್ವಹಣಾಧಿಕಾರಿ ಡಾ. ಅಲೆಗ್ಸಾಂಡರ್ ಥಾಮಸ್ ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಿಯಲತಾ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶ್ವತ್ಥಮ್ಮ. ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಆಲ್ಕೊಹಾಲ್ ಅನಾನಿಮಸ್ ರೀಜನಲ್ ಟ್ರಸ್ಟ್ ನಿರ್ದೇಶಕ ಶ್ರಿಕಾಂತ್, ಹೆಬ್ಬಾಳ ನ್ಯೂಡಾನ್ ಶಿಕ್ಷಣ ಮತ್ತು ಪುರ್ನವಸತಿ ಕೇಂದ್ರ ಕಾರ್ಯ ನಿರ್ವಹಣಾಧಿಕಾರಿ ರುಕ್ಸಾನಾ ಹಾಸನ್, ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ ಸಮುದಾಯ ಆರೋಗ್ಯ ಮುಖ್ಯಸ್ಥ ಡಾ. ಗಿಫ್ಟ್ ನಾರ್ಮನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.ಭೂಮಿ ಹಬ್ಬ

ದೊಡ್ಡಬಳ್ಳಾಪುರ: ತಾಲ್ಲೂಕಿನ ತಿಪ್ಪಾಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿ ಅ.23 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ `ಭೂಮಿ ಹಬ್ಬ~ ನಡೆಯಲಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ.ವಿಜಯ್‌ಕುಮಾರ್ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry