ಕೆಬಿಎಲ್: ಇಂದು ಫ್ರಾಂಚೈಸಿಗಳ ಆಯ್ಕೆ

7

ಕೆಬಿಎಲ್: ಇಂದು ಫ್ರಾಂಚೈಸಿಗಳ ಆಯ್ಕೆ

Published:
Updated:

ಬೆಂಗಳೂರು: ಚೊಚ್ಚಲ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್) ನವೆಂಬರ್ 5ರಿಂದ ಆರಂಭವಾಗಲಿದ್ದು, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಸೋಮವಾರ ಫ್ರಾಂಚೈಸಿಗಳ ಆಯ್ಕೆ ನಡೆಯಲಿದೆ.`ಒಟ್ಟು 16 ಅರ್ಜಿಗಳು ಬಂದಿದ್ದು, ಅದರಲ್ಲಿ ಎಂಟು ಅರ್ಜಿಗಳನ್ನು ಆರಿಸಿಕೊಂಡು ಫ್ರಾಂಚೈಸಿಗಳ ಆಯ್ಕೆ ಮಾಡಲಾಗುವುದು~ ಎಂದು ಕೆಬಿಎಲ್  ಮುಖ್ಯಸ್ಥ ಥಾಮಸ್ ಕುನ್ನತ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.`ಬೇರೆ ಬೇರೆ ಜಿಲ್ಲೆಗಳಿಂದಲೂ ಅರ್ಜಿಗಳು ಬಂದಿವೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು. ಫ್ರಾಂಚೈಸಿಗಳ ಆಯ್ಕೆ ಅಂತಿಮವಾದ ಮೇಲೆ ಸ್ಪಷ್ಟ ಚಿತ್ರಣ ಸಿಗಲಿದೆ. ಸೋಮವಾರ ರಾತ್ರಿ 7ರ ವರೆಗೂ ಬಿಡ್ ನಡೆಯಲಿದೆ. ಮೂರು ವರ್ಷದ ಅವಧಿಗೆ ಕನಿಷ್ಠ 2.5 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ~ ಎಂದು ಅವರು ಹೇಳಿದರು.ಅಗ್ರ 90 ಆಟಗಾರರು ಕೆಬಿಎಲ್‌ನಲ್ಲಿ ಪಾಲ್ಗೊಳ್ಳಲು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಅಕ್ಟೋಬರ್ 24ರಂದು ಆಟಗಾರರ ಹರಾಜು ನಡೆಯಲಿದೆ. ರಾಷ್ಟ್ರೀಯ ಚಾಂಪಿಯನ್ ಅರವಿಂದ್ ಭಟ್, ಅನೂಪ್ ಶ್ರೀಧರ್, ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಅಶ್ವಿನಿ ಪೊನ್ನಪ್ಪ, ಜಿ. ನಿಶ್ಚಿತಾ ಸೇರಿದಂತೆ ಇತರ ಪ್ರಮುಖ ಸ್ಪರ್ಧಿಗಳು ಈ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry