ಕೆಮರ್ ರೋಚ್ ಹ್ಯಾಟ್ರಿಕ್; ವಿಂಡೀಸ್‌ಗೆ ಭರ್ಜರಿ ಜಯ.ಕೊಚ್ಚಿಹೋದ ಹಾಲೆಂಡ್

7

ಕೆಮರ್ ರೋಚ್ ಹ್ಯಾಟ್ರಿಕ್; ವಿಂಡೀಸ್‌ಗೆ ಭರ್ಜರಿ ಜಯ.ಕೊಚ್ಚಿಹೋದ ಹಾಲೆಂಡ್

Published:
Updated:
ಕೆಮರ್ ರೋಚ್ ಹ್ಯಾಟ್ರಿಕ್; ವಿಂಡೀಸ್‌ಗೆ ಭರ್ಜರಿ ಜಯ.ಕೊಚ್ಚಿಹೋದ ಹಾಲೆಂಡ್

ನವದೆಹಲಿ: ಕ್ರಿಸ್ ಗೇಲ್ ಮತ್ತು ಕೀರನ್ ಪೊಲಾರ್ಡ್ ಅವರು ಮಧ್ಯಾಹ್ನದ ಅವಧಿಯಲ್ಲಿ ಬ್ಯಾಟ್ ಮೂಲಕ ಅಬ್ಬರಿಸಿದರೆ, ಕೆಮರ್ ರೋಚ್ ರಾತ್ರಿ ಹೊನಲು ಬೆಳಕಿನಲ್ಲಿ ಚೆಂಡಿನ ಮೂಲಕ ಮೆರೆದಾಡಿ ‘ಹ್ಯಾಟ್ರಿಕ್’ ಸಾಧನೆ ಮಾಡಿದರು.ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡ ಪುಟಿದೆದ್ದು ನಿಂತಾಗ ಎದುರಾಳಿ ಹಾಲೆಂಡ್ ತಬ್ಬಿಬ್ಬು. ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಸೋಮವಾರ ವಿಂಡೀಸ್ 215 ರನ್‌ಗಳ ಭರ್ಜರಿ ಜಯ ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ಡರೆನ್ ಸಾಮಿ ನೇತೃತ್ವದ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 330 ಪೇರಿಸಿದರೆ, ಹಾಲೆಂಡ್ 31.3 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲೌಟಾಯಿತು. ಹ್ಯಾಟ್ರಿಕ್ ಒಳಗೊಂಡಂತೆ ಆರು ವಿಕೆಟ್ ಪಡೆದ ಕೆಮರ್ ರೋಚ್ (27ಕ್ಕೆ 6) ವಿಂಡೀಸ್ ತಂಡದ ‘ಹೀರೊ’ ಎನಿಸಿದರು.ಕ್ರಿಸ್ ಗೇಲ್ (80, 110 ಎಸೆತ, 7 ಬೌಂ. 2 ಸಿಕ್ಸರ್), ಕೀರನ್ ಪೊಲಾರ್ಡ್ (60, 27 ಎಸೆತ, 5 ಬೌಂ, 4 ಸಿಕ್ಸರ್), ಡೆವೊನ್ ಸ್ಮಿತ್ (53, 51 ಎಸೆತ, 9 ಬೌಂ) ಮತ್ತು ರಾಮನರೇಶ್ ಸರವಣ್ (42 ಎಸೆತಗಳಲ್ಲಿ 49) ಅವರು ವಿಂಡೀಸ್‌ನ ಬೃಹತ್ ಮೊತ್ತಕ್ಕೆ ಕಾರಣರಾದರು.ರೋಚ್ ಅವರು 32ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಪೀಟರ್ ಸೀಲಾರ್, ಬರ್ನಾರ್ಡ್ ಲೂಟ್ಸ್ ಮತ್ತು ಬೆರೆಂಡ್ ವೆಸ್ಟ್‌ಡಿಕ್ ವಿಕೆಟ್ ಪಡೆದು 10ನೇ ವಿಶ್ವಕಪ್ ಟೂರ್ನಿಯ ಮೊದಲ ಹ್ಯಾಟ್ರಿಕ್ ಸಾಧನೆ ತಮ್ಮದಾಗಿಸಿಕೊಂಡರು. ಮಾತ್ರವಲ್ಲ ವಿಶ್ವಕಪ್‌ನ ಇತಿಹಾಸದಲ್ಲಿ ಇಂತಹ ಸಾಧನೆ ಮಾಡಿದ ಆರನೇ ಬೌಲರ್ ಎನಿಸಿದರು. ಬೃಹತ್ ಮೊತ್ತ ಬೆನ್ನಟ್ಟಿದ ಹಾಲೆಂಡ್‌ಗೆಸುಲೆಮಾನ್ ಬೆನ್ (28ಕ್ಕೆ 3) ಮತ್ತು ರೋಚ್ ಆರಂಭದಲ್ಲೇ ಆಘಾತ ನೀಡಿದರು. 36 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಟಾಮ್ ಕೂಪರ್ (ಅಜೇಯ 55) ಮಾತ್ರ ವಿಂಡೀಸ್ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಂತರು.ಭರ್ಜರಿ ಬ್ಯಾಟಿಂಗ್: ಟಾಸ್ ಗೆದ್ದರೂ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದ ಹಾಲೆಂಡ್ ನಾಯಕ ಪೀಟರ್ ಬೊರೆನ್ ಅದಕ್ಕೆ ತಕ್ಕ ಬೆಲೆ ತೆತ್ತರು. ವಿಂಡೀಸ್‌ನ ಅಗ್ರ ಕ್ರಮಾಂಕದ ಎಲ್ಲ ಬ್ಯಾಟ್ಸ್‌ಮನ್‌ಗಳು ಮಿಂಚಿದರು. ಯಾರೂ ಶತಕ ಗಳಿಸಲಿಲ್ಲ. ಆದರೂ ತಂಡ 330 ರನ್ ಕಲೆಹಾಕಿತು. ಡೆವೊನ್ ಸ್ಮಿತ್ ಮತ್ತು ಕ್ರಿಸ್ ಗೇಲ್ ಮೊದಲ ವಿಕೆಟ್‌ಗೆ 16.3 ಓವರ್‌ಗಳಲ್ಲಿ 100 ರನ್ ಸೇರಿಸಿದರು. ಗೇಲ್ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿಲ್ಲ. ಅದಕ್ಕೆ ಬದಲು ತಂಡದ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. ಕೆರಿಬಿಯನ್ ತಂಡದ ಸ್ಕೋರಿಂಗ್‌ನ ವೇಗ ಹೆಚ್ಚಿಸಿದ್ದು ಕೀರನ್ ಪೊಲಾರ್ಡ್.ಐಸಿಸಿ ವಿಶ್ವಕಪ್ 2011 ಪಾಯಿಂಟ್ ಪಟ್ಟಿ

‘ಎ’ ಗುಂಪು

ತಂಡ ಪಂದ್ಯ ಜಯ ಸೋಲು ಟೈ ರದ್ದು ಪಾಯಿಂಟ್ ರನ್‌ರೇಟ್

ಪಾಕಿಸ್ತಾನ 2 2 0 0 0 4 +2.160

ಆಸ್ಟ್ರೇಲಿಯ 2 2 0 0 0 4 +1.813

ಶ್ರೀಲಂಕಾ 2 1 1 0 0 2 +1.990 

ನ್ಯೂಜಿಲೆಂಡ್ 2 1 1 0 0 2 +1.507

ಜಿಂಬಾಬ್ವೆ 2 1 1 0 0 2 +0.840

ಕೆನಡಾ 2 0 2 0 0 0 -3.850

ಕೀನ್ಯಾ 2 0 2 0 0 0 -4.897‘ಬಿ’ ಗುಂಪು


ತಂಡ ಪಂದ್ಯ ಜಯ ಸೋಲು ಟೈ ರದ್ದು ಪಾಯಿಂಟ್ ರನ್‌ರೇಟ್

ಭಾರತ 2 1 0 1 0 3 +0.870

ಇಂಗ್ಲೆಂಡ್ 2 1 0 1 0 3 +0.126

ವೆಸ್ಟ್ ಇಂಡೀಸ್ 2 1 1 0 0 2 -1.879

ದಕ್ಷಿಣ ಆಫ್ರಿಕ 1 1 0 0 0 2 +0.766

ಬಾಂಗ್ಲಾದೇಶ 2 1 1 0 0 2 -0.600

ಐರ್ಲೆಂಡ್ 1 0 1 0 0 0 -0.540

ಹಾಲೆಂಡ್ 2 0 2 0 0 0 -2.275ಸ್ಕೋರು ವಿವರ


ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 330ಡೆವೊನ್ ಸ್ಮಿತ್ ಸಿ ಬಾರೆಸಿ ಬಿ ಬರ್ನಾರ್ಡ್ ಲೂಟ್ಸ್  53

ಕ್ರಿಸ್ ಗೇಲ್ ಸಿ ಕೆರ್ವೆಜಿ ಬಿ ರ್ಯಾನ್ ಟೆನ್ ಡಾಶೆಟ್  80

ಡರೆನ್ ಬ್ರಾವೊ ಸಿ ಕೆರ್ವೆಜಿ ಬಿ ಪೀಟರ್ ಸೀಲಾರ್  30

ರಾಮನರೇಶ್ ಸರವಣ್ ಎಲ್‌ಬಿಡಬ್ಲ್ಯು ಬಿ ಬೆರೆಂಡ್ ವೆಸ್ಟ್‌ಡಿಕ್  49

ಕೀರನ್ ಪೊಲಾರ್ಡ್ ಸಿ ಡಾಶೆಟ್ ಬಿ ಮುದಸ್ಸರ್ ಬುಖಾರಿ  60

ಡರೆನ್ ಸಾಮಿ ಸಿ ಕೆರ್ವೆಜಿ ಬಿ ಪೀಟರ್ ಸೀಲಾರ್  06

ಶಿವನಾರಾಯಣ ಚಂದ್ರಪಾಲ್ ಬಿ ಪೀಟರ್ ಸೀಲಾರ್  04

ಡೆವೊನ್ ಥಾಮಸ್ ಎಲ್‌ಬಿಡಬ್ಲ್ಯು ಬಿ ಮುದಸ್ಸರ್ ಬುಖಾರಿ  13

ನಿಕಿತಾ ಮಿಲ್ಲರ್ ಔಟಾಗದೆ  11

ಸುಲೆಮಾನ್ ಬೆನ್ ಔಟಾಗದೆ  03ಇತರೆ: (ಬೈ-3, ಲೆಗ್‌ಬೈ-3, ವೈಡ್-14, ನೋಬಾಲ್-1)  21

ವಿಕೆಟ್ ಪತನ: 1-100 (ಸ್ಮಿತ್; 16.3), 2-168 (ಬ್ರಾವೊ; 31.2), 3-196 (ಗೇಲ್; 36.2), 4-261 (ಸರವಣ್; 42.1), 5-278 (ಸಾಮಿ; 43.4), 6-290 (ಚಂದ್ರಪಾಲ್; 45.4), 7-312 (ಪೊಲಾರ್ಡ್; 47.5), 8-326 (ಥಾಮಸ್; 49.4).ಬೌಲಿಂಗ್: ಮುದಸ್ಸರ್ ಬುಖಾರಿ 10-1-65-2, ಬೆರೆಂಡ್ ವೆಸ್ಟ್‌ಡಿಕ್ 7-0-56-1, ರ್ಯಾನ್ ಟೆನ್ ಡಾಶೆಟ್ 10-0-77-1, ಬರ್ನಾರ್ಡ್ ಲೂಟ್ಸ್ 7-0-44-1, ಟಾಮ್ ಕೂಪರ್ 6-0-37-0, ಪೀಟರ್ ಸೀಲಾರ್ 10-1-45-3ಹಾಲೆಂಡ್ 31.3 ಓವರ್‌ಗಳಲ್ಲಿ 115ಅಲೆಕ್ಸಿ ಕೆರ್ವೆಜಿ ಸ್ಟಂಪ್ ಥಾಮಸ್ ಬಿ ಸುಲೆಮಾನ್ ಬೆನ್ 14

ವೆಸ್ಲಿ ಬಾರೆಸಿ ಸಿ ಗೇಲ್ ಬಿ ಕೆಮರ್ ರೋಚ್ 00

ಟಾಮ್ ಕೂಪರ್ ಔಟಾಗದೆ 55

ರ್ಯಾನ್ ಟೆನ್ ಡಾಶೆಟ್ ಎಲ್‌ಬಿಡಬ್ಲ್ಯು ಬಿ ಸುಲೆಮಾನ್ ಬೆನ್ 07

ಬಾಸ್ ಜುಡೆರೆಂಟ್ ಬಿ ಕೆಮರ್ ರೋಚ್ 01

ಟಾಮ್ ಡಿ ಗ್ರೂಥ್ ಎಲ್‌ಬಿಡಬ್ಲ್ಯು ಬಿ ಸುಲೆಮಾನ್ ಬೆನ್ 01

ಪೀಟರ್ ಬೊರೆನ್ ಸಿ ಪೊಲಾರ್ಡ್ ಬಿ ಡರೆನ್ ಸಾಮಿ 10

ಮುದಸ್ಸರ್ ಬುಖಾರಿ ಬಿ ಕೆಮರ್ ರೋಚ್ 24

ಪೀಟರ್ ಸೀಲಾರ್ ಎಲ್‌ಬಿಡಬ್ಲ್ಯು ಬಿ ಕೆಮರ್ ರೋಚ್ 01

ಬರ್ನಾರ್ಡ್ ಲೂಟ್ಸ್ ಎಲ್‌ಬಿಡಬ್ಲ್ಯು ಬಿ ಕೆಮರ್ ರೋಚ್ 00

ಬೆರೆಂಡ್ ವೆಸ್ಟ್‌ಡಿಕ್ ಬಿ ಕೆಮರ್ ರೋಚ್ 00ಇತರೆ: (ಲೆಗ್‌ಬೈ-2) 02ವಿಕೆಟ್ ಪತನ: 1-2 (ಬಾರೆಸಿ; 1.4), 2-26 (ಕೆರ್ವೆಜಿ; 6.4), 3-34 (ಡಾಶೆಟ್; 8.1), 4-35 (ಜುಡೆರೆಂಟ್; 9.3), 5-36 (ಗ್ರೂಥ್; 10.2), 6-56 (ಬೊರೆನ್; 18.1), 7-113 (ಬುಖಾರಿ; 29.4), 8-115 (ಸೀಲಾರ್; 31.1), 9-115 (ಲೂಟ್ಸ್; 31.2), 10-115 (ವೆಸ್ಟ್‌ಡಿಕ್).ಬೌಲಿಂಗ್: ಸುಲೆಮಾನ್ ಬೆನ್ 8-1-28-3, ಕೆಮರ್ ರೋಚ್ 8.3-0-27-6, ನಿಕಿತಾ ಮಿಲ್ಲರ್ 7-0-23-0, ಡರೆನ್ ಸಾಮಿ 7-0-33-1, ಕೀರನ್ ಪೊಲಾರ್ಡ್ 1-0-2-0ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 215 ರನ್ ಗೆಲುವುಪಾಯಿಂಟ್ಸ್: ವೆಸ್ಟ್ ಇಂಡೀಸ್-2, ಹಾಲೆಂಡ್-0; ಪಂದ್ಯಶ್ರೇಷ್ಠ: ಕೆಮರ್ ರೋಚ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry