ಭಾನುವಾರ, ಮೇ 16, 2021
29 °C

ಕೆರೆಗಳ ಪುನರುಜ್ಜೀವನಕ್ಕೆ ಐದು ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಜನಸಂಖ್ಯೆಗೆ ಅನುಗು ಣವಾಗಿ ಕುಡಿಯುವ ನೀರಿನ ಪುನರು ಜ್ಜೀವನಕ್ಕೆ ಸರಕಾರ ವಿಶೇಷ ಕಾಳಜಿ ವಹಿಸಿದೆ. ಆದ್ದರಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರಕಾರವು ಐದು ಕೋಟಿ ರೂಪಾಯಿಗಳ ಬಿಡುಗಡೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ ಹೇಳಿದರು.ಮಂಗಳವಾರ ತಾಲ್ಲೂಕಿನ ಹದಲಿಯಲ್ಲಿ  ಕುಡಿಯುವ ನೀರಿನ ಕೆರೆಗೆ ರಕ್ಷಣಾಗೋಡೆ ನಿರ್ಮಾಣದ ಕಾಮ ಗಾರಿಗೆ ಭೂಮಿ ಪೂಜೆ  ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು. ಕೆರೆಯ  ರಕ್ಷಣಾ ಗೋಡೆಗೆ ಸುಮಾರು ರೂ 28 ಲಕ್ಷ ರೂಪಾಯಿ ಗಳನ್ನು ವ್ಯಯಿಸಲಾಗುತ್ತಿದೆ. ಯಡಿ ಯೂರಪ್ಪನವರ ವಿಶೇಷ ಕಾಳಜಿ ಮೂಲಕ ಕೆರೆಗಳ ಪುನರುಜ್ಜೀವನ ಯೋಜನೆ ಜಾರಿಗೆ ಬಂದಿದೆ ಎಂದು ಮಾಹಿತಿ ನೀಡಿದರು.ರಾಜ್ಯ ಸರಕಾರ ಅಪಾರ ಪ್ರಮಾಣದಲ್ಲಿ ಕೆರೆಗಳ ಅಭಿವೃದ್ಧಿಗೆ ಹಣ ನೀಡುತ್ತಿದೆ. ಹಿಂದೆ ಇಷ್ಟು  ಪ್ರಮಾಣದಲ್ಲಿ  ಯಾವ ಸರಕಾರ ಹಣ ನೀಡಿಲ್ಲವೆಂದು ಸ್ಪಷ್ಟಪಡಿಸಿದರು.   ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು. ವೀರಭದ್ರೇಶ್ವರ ಹಾಗೂ ಚಿದಾನಂದ ಮಠದ ದ್ವಾರಬಾಗಿಲ ನಿರ್ಮಾಣಕ್ಕೆ ಅನುದಾನದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ  ಎಚ್.ಡಿ ಶಲವಡೆ, ಕುಬೇರಗೌಡ ಕುದರಿ, ಬಿಜೆಪಿ ಅಧ್ಯಕ್ಷ ಚಂದ್ರು ದಂಡಿನ, ಬಿ,ಬಿ.ಐನಾಪೂರ ಮಾತನಾಡಿದರು.ಗ್ರಾಮಸ್ಥರ ವತಿಯಿಂದ ಸಚಿವ ಸಿ.ಸಿ.ಪಾಟೀಲರನ್ನು ಸನ್ಮಾನಿ ಸಲಾಯಿತು.   ಜಿಪಂ ಸದಸ್ಯೆ ಶಾಂತಾ ದಂಡಿನ, ತಾಪಂ  ಉಪಾಧ್ಯಕ್ಷೆ ಪಾರವ್ವ ಹಡಗಲಿ, ಗ್ರಾಪಂ ಅಧ್ಯಕ್ಷೆ ಶಿವವ್ವ ವಿಠ್ಠಪ್ಪನವರ, ಉಪಾಧ್ಯಕ್ಷೆ ಚನ್ನಬಸವ್ವ ಚಲವಾದಿ, ಸದಸ್ಯರಾದ ರಾಮನಗೌಡ್ರ ಪರ್ವತಗೌಡ್ರ, ಎಲ್ಲಪ್ಪಗೌಡ ಪರ್ವತ ಗೌಡ್ರ, ಬಸಲಿಂಗಯ್ಯ ಹಿರೇಮಠ, ಗುರಪ್ಪ ಕುಂಬಾರ, ಬಿ.ಜಿ.ಸುಂಕದ, ವಿ.ಎಸ್.ಹಿರೇಮಠ  ಜಿಪಂ ಅಧಿಕಾರಿ ಪಿ.ವೈ.ಹುಣಸಿಕಟ್ಟಿ ಇತರರು ಹಾಜರಿದ್ದರು.ಅಶೋಕ ನವಲಗುಂದ ಸ್ವಾಗತಿಸಿದರು. ಯಲ್ಲಪ್ಪಗೌಡ ಬನಹಟ್ಟಿ ನಿರೂಪಿಸಿದರು. ಕೆ.ಎಸ್.ಹದಗಲ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.