ಕೆರೆಗಳ ಸಂರಕ್ಷಣೆಗೆ ಮುಂದಾಗಲು ಸಲಹೆ

7

ಕೆರೆಗಳ ಸಂರಕ್ಷಣೆಗೆ ಮುಂದಾಗಲು ಸಲಹೆ

Published:
Updated:

ಧಾರವಾಡ: `ಕೆರೆಗಳ ರಕ್ಷಣೆಗೆ ಸಾರ್ವಜನಿಕರು ಮುಂದಾ ಗಬೇಕು. ಕೆಲಗೇರಿ ಕೆರೆಯು ಸರ್ಕಾರದ ವಿಶೇಷ ಅನುದಾನ ದಡಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಇದನ್ನು ಉತ್ತಮ ವಾಗಿ ಕಾಯ್ದುಕೊಂಡು ಹೋಗಲು ಜನರು ಸಹಕರಿ ಸಬೇಕು~ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಆರ್.ಹಂಚಿನಾಳ ಹೇಳಿದರು.ಕೆಲಗೇರಿ ಕೆರೆಗೆ ಕೆಲಗೇರಿ ಕೆರೆ ಅಭಿವೃದ್ಧಿ ಸಮಿತಿ ವತಿ ಯಿಂದ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿ ಮಾತನಾಡಿದ ಅವರು, 1011ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಈ ಕೆರೆಗೆ ಅವರ ಹೆಸರಿಡಲು ಮುಂಬರುವ ಕೃಷಿ ವಿವಿಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಕೊಳ್ಳ ಲಾಗುವುದು ಎಂದರು.ಸಮಿತಿ ಅಧ್ಯಕ್ಷ ಸಿ.ಎಸ್.ಪಾಟೀಲ, ಶಂಕರ ಕುಂಬಿ ಮಾತನಾಡಿದರು. ಉದ್ಯಮಿ ಜಿ.ಜಿ.ದೊಡವಾಡ ಅಧ್ಯಕ್ಷತೆ ವಹಿಸಿದ್ದರು. ಬಿ.ಸಿ.ಪೂಜಾರ, ಸತೀಶ ಮಲ್ಹೋತ್ರ, ನಾಗ ರಾಜ ಕುಡ್ಲಣ್ಣವರ, ರಾಮಚಂದ್ರ ಭಿಸೆ, ಮಲ್ಲಿಕಾರ್ಜುಮ ಅಥಣಿ, ಕೃಷ್ಣ ಕುಲಕರ್ಣಿ, ಚಂದ್ರಶೇಖರ ಕುಡ್ಲಣ್ಣವರ, ಆನಂದ ಪಾಟೀಲ, ಚಂದ್ರು ತಳವಾರ, ವಿಜಯ ಸಾಲಿ, ಮಲ್ಲಣ್ಣ ಸಾಧನಿ ಮತ್ತಿತರರು ಉಪಸ್ಥಿತರಿದ್ದರು. ರಾಜು ಕುಲಕರ್ಣಿ ವಂದಿಸಿದರು. ನಾರಾಯಣ ಕದಂ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry