ಕೆರೆಗೆ ವಿಷ: ಮೀನುಗಳ ಸಾವು

ಶನಿವಾರ, ಮೇ 25, 2019
27 °C

ಕೆರೆಗೆ ವಿಷ: ಮೀನುಗಳ ಸಾವು

Published:
Updated:

ಕೊರಟಗೆರೆ: ತಾಲ್ಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಿಹಳ್ಳಿ ಸಮೀಪದ ಕವರಗಲ್ಲು ಕಂಬದಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ಗೆಂದು ಗ್ರಾಮಸ್ಥರು ಬಿಟ್ಟಿದ್ದ ಮೀನುಗಳ ಮಾರಣ ಹೋಮ ನಡೆದಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.ಕಂಬದಹಳ್ಳಿ ಗ್ರಾಮಕ್ಕೆ ಹೊಂದಿ ಕೊಂಡಂತಿರುವ ಕೆರೆಗೆ ಗ್ರಾಮಸ್ಥರು 3 ವರ್ಷಗಳ ಹಿಂದೆ ವಿವಿಧ ತಳಿಯ ಸುಮಾರು 2 ಲಕ್ಷಕ್ಕೂ ಅಧಿಕ ಮೀನು ಮರಿಗಳನ್ನು ಬಿಟ್ಟಿದ್ದರು. ಮೀನುಗಳು 3ರಿಂದ 4 ಕೆ.ಜಿ. ಗಾತ್ರವಿದ್ದವು.

ಮೀನುಗಳನ್ನು ಕಂಬದಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಬಳಸುತ್ತಿದ್ದರು. ಆದರೆ ಸುತ್ತಮುತ್ತಲಿನ ಗ್ರಾಮಗಳನ್ನು ಹೊರತುಪಡಿಸಿ ಇತರರಿಗೆ ಮೀನು ಹಿಡಿಯುದಕ್ಕೆ ಸ್ಥಳೀಯ ಗ್ರಾಮಸ್ಥರು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಯಲ್ಲಿ ಕಳೆದ ಮಂಗಳವಾರ ರಾತ್ರಿ ಕಿಡಿಗೇಡಿಗಳು ಮೀನು ಹಿಡಿಯಲು ಕೆರೆಗೆ ಬಂದು ಸಾಕಷ್ಟು ಮೀನುಗಳನ್ನು ಹಿಡಿದು ನಂತರ ವಿಷಪ್ರಾಶನ ಮಾಡಿದ್ದಾ ರೆಂದು ಗ್ರಾಸ್ಥರು ದೂರಿದ್ದಾರೆ.ಸಣ್ಣ ಮೀನಿನ ಮರಿಯಿಂದ ಹಿಡಿದು ದೊಡ್ಡ ಗಾತ್ರದ ಮೀನುಗಳು ಸತ್ತು ಕೆರೆ ತುಂಬೆಲ್ಲಾ ರಾಶಿ ರಾಶಿ ತೇಲುತ್ತಿದ್ದವು. ಕೆರೆಯ ಸುತ್ತಮುತ್ತ ವಿಪರೀತ ದುರ್ವಾಸನೆ ಬೀರುತ್ತಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry