ಕೆರೆಯಂತಾಗುವ ರಸ್ತೆ, ಬಾರದ ಬಸ್ಸು

7

ಕೆರೆಯಂತಾಗುವ ರಸ್ತೆ, ಬಾರದ ಬಸ್ಸು

Published:
Updated:

ರಾಜರಾಜೇಶ್ವರಿನಗರ ವಲಯದ ಲಗ್ಗೆರೆ ಮುಖ್ಯ ರಸ್ತೆಯನ್ನು ವಿವಿಧ ಸಂದರ್ಭದಲ್ಲಿ ಅಗೆದು ಗುಂಡಿಗಳ ತಾಣವನ್ನಾಗಿ ಮಾಡಿಬಿಟ್ಟಿದ್ದಾರೆ. ಇದರಿಂದ ಮಳೆಗಾಲದಲ್ಲಿ ಅಲ್ಲಲ್ಲಿ ನೀರಿನ ಸಣ್ಣ ಸಣ್ಣ ಕೆರೆಗಳು ನಿರ್ಮಾಣವಾಗುತ್ತವೆ. ಇದರಿಂದ ಬಿಎಂಟಿಸಿ ಬಸ್ಸುಗಳು ಹೊಸ ಬಸ್ಸು ನಿಲ್ದಾಣಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟಿವೆ. ಈ ಮುಖ್ಯರಸ್ತೆಯಲ್ಲಿ ನಾಗರಿಕರು ನಡೆದುಕೊಂಡು ಹೋಗುವುದೂ ತುಂಬಾ ಕಷ್ಟಕರವಾಗಿದೆ.ಈಗಲಾದರೂ ಬಿಬಿಎಂಪಿ ಆಯುಕ್ತರಾಗಲಿ, ನೂತನ ಶಾಸಕರಾಗಲಿ, ಲೋಕಸಭಾ ಸದಸ್ಯರಾಗಲಿ ಸೂಕ್ತ ಕ್ರಮ ಕೈಗೊಂಡು ಲಗ್ಗರೆ ಮುಖ್ಯರಸ್ತೆಗೆ ಡಾಂಬರೀಕರಣ ಮಾಡಿಸಿಕೊಡುತ್ತಾರೆಂದು ಆಶಿಸೋಣವೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry