ಕೆರೆಯ ವ್ಯಥೆ ಕೇಳುವರಿಲ್ಲ

7

ಕೆರೆಯ ವ್ಯಥೆ ಕೇಳುವರಿಲ್ಲ

Published:
Updated:

ನಗರದ ಜೆ.ಪಿ. ನಗರದ ಸಾರಕ್ಕಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಕೆರೆಯ ಸುತ್ತಮುತ್ತ ಉದ್ಯಾನವನ್ನು ನಿರ್ಮಿಸಲಾಗುವುದು ಎಂದಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಭರವಸೆ ಇನ್ನೂ ಅನುಷ್ಠಾನವಾಗಿಲ್ಲ, ಏಕೆ? ಚರಂಡಿ ನೀರು ಕೆರೆಗೆ ಸೇರಿ ಕೆರೆ ಸಂಪೂರ್ಣ ಕಲುಷಿತಗೊಂಡಿದೆ.

ಸೊಳ್ಳೆ ಇನ್ನಿತರ ಕ್ರಿಮಿಕೀಟಗಳ ವಾಸಸ್ಥಾನವಾಗಿದೆ. ಅನುಪಯುಕ್ತ ಗಿಡಗಳು ಬೆಳೆದಿವೆ. ಕೋರಮಂಗಲದ ಜಕ್ಕಸಂದ್ರ ಬಳಿ ಇರುವ ಕೆರೆಯದು ಕೂಡ ಇದೇ ಕಥೆ–ವ್ಯಥೆ. ಬೆಂಗಳೂರಿನಲ್ಲಿ ಕೆಂಪೇಗೌಡರ ಕಾಲದಲ್ಲಿ ಸಾವಿರಾರು ಕೆರೆಗಳು ಇದ್ದವು. ಆದರೆ ಈಗ ಬೆಂಗಳೂರಿನಲ್ಲಿ 60 ಕೆರೆಗಳು ಮಾತ್ರ ಉಳಿದಿವೆ. ಈ 60 ಕೆರೆಗಳಲ್ಲಿ ಕೆಲವು ಕೆರೆಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ಕೆಲವು ಒತ್ತುವರಿ ಕೆರೆಗಳಾಗಿವೆ.

ಇನ್ನು ಕೆಲವು ಕಲುಷಿತಗೊಂಡಿವೆ. ಕೆರೆ ಭಕ್ಷಕರಿಂದ ಈ ಕೆರೆಗಳನ್ನು ಕಾಪಾಡಿ ಕೆರೆಯನ್ನು ಸ್ವಚ್ಛಗೊಳಿಸಿ, ಮನರಂಜನೆ ಕೇಂದ್ರವಾಗಿಸುವ ಕ್ರಮಗಳನ್ನು ಕೆರೆ ಪ್ರಾಧಿಕಾರ ಹಾಗೂ ಬಿಬಿಎಂಪಿ ಕೈಗೊಂಡರೆ ನಗರದ ನಾಗರಿಕರಿಗೆ ಸಂತಸವಾಗುತ್ತದೆ. ಹಿಂದಿನವರು ಊರ ಹಿತಕ್ಕಾಗಿ ಕೆರೆಗೆ ಹಾರವಾಗುತ್ತಿದ್ದರು. ಇಂದಿನ ಕೆರೆ ಭಕ್ಷಕರಿಂದ ನಗರದ ಕೆರೆಗಳನ್ನು ಕಾಪಾಡುವವರು ಯಾರು?

–ಕಾಡನೂರು ರಾಮಶೇಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry