ಶುಕ್ರವಾರ, ಜೂನ್ 18, 2021
28 °C

ಕೆರೆ ಉಳಿಸಲು ಪಣತೊಡಿ: ನಂಜುಂಡಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: `ಕೆರೆ ಉಳಿವಿಗೆ ಗ್ರಾಮೀಣ ಜನತೆ ಹೆಚ್ಚಿನ ಒತ್ತು  ನೀಡಬೇಕು~ ಎಂದು ಶಾಸಕ ನಂಜುಂಡಸ್ವಾಮಿ ಸಲಹೆ ನೀಡಿದರು.  ತಾಲ್ಲೂಕಿನ ಬೆಂಗಳೂರು ರಸ್ತೆ ಪಾಪನ ಕಟ್ಟೆ ಹೂಳು ತೆಗೆಯುವ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಹಣದ ಆಸೆಯಿಂದ ಭೂಕಬಳಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಬರಗಾಲ ಬಂದಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಹಳವಾಗಿ ಕಾಡುವುದರಿಂದ ಜನರು ಕೆರೆಗಳನ್ನು ಉಳಿಸಿ ಬೆಳೆಸಲು ಸಹಕರಿಸಬೇಕು ಎಂದು ಹೇಳಿದರು.38.30ಲಕ್ಷ ಅಂದಾಜುವೆಚ್ದದಲ್ಲಿ ಕೆರೆಯ 37 ಎಕರೆ ಭೂಮಿಯಲ್ಲಿ ಒಂದೂಕಾಲು ಅಡಿ ಹೂಳನ್ನು ತೆಗೆಯಲಾಗುವುದು. ಇದರಿಂದ 612 ಎಕರೆ ಜಮೀನಿಗೆ ನೀರಾವರಿ ದೊರೆಯಲಿದೆ ಎಂದು ಹೇಳಿದರು.ಗುಂಡಾಲ್ ಜಲಾಶಯದಿಂದ ಈ ಕೆರೆಗೆ ನೀರುಪೂರೈಸುವ ಅವಕಾಶ ಇದ್ದು ಕೆರೆಯನ್ನು ಹೂಳು ತೆಗೆದ ನಂತರ ಹೆಚ್ಚಿನ ನೀರು ಶೇಖರಣೆಗೊಂಡು ಸುತ್ತಮುತ್ತಲ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಳವಾಗುತ್ತದೆ ಎಂದು ಅವರು ತಿಳಿಸಿದರು.ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮುರಳೀಧರ್, ಜೆ.ಇ. ರಾಮಕೃಷ್ಣ, ಗುತ್ತಿಗೆದಾರ ಸುಧಾಶೇಖರ್, ನಗರಸಭಾ ಸದಸ್ಯ ಜಿ.ಪಿ.ಶಿವಕುಮಾರ್ ಇತರರು  ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.