ಭಾನುವಾರ, ಏಪ್ರಿಲ್ 11, 2021
29 °C

ಕೆರೆ ಏರಿಗೆ ಹಸಿರು ಹಾಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ವಿವಿಧ ಯೋಜನೆಯಡಿ ಕರೆ ಕಟ್ಟೆಗಳ ದುರಸ್ತಿ ನಡೆಯುತ್ತಿದೆ.

 ಹಲವು ವರ್ಷಗಳಿಂದ ದುರಸ್ತಿ ಕಾಣದೆ ಕೊರಕಲಾಗಿದ್ದ ಕಟ್ಟೆಗಳಿಗೆ ಮಣ್ಣು ಹೊಡೆದು ಭದ್ರಪಡಿಸಲಾಗುತ್ತಿದೆ.ಕೆರೆ ಏರಿ ಮೇಲಿನ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗದಂತೆ ಹುಲ್ಲಿನ ಹಾಸು ಹಾಕುತ್ತಿರುವುದು ಒಂದು ವಿಶೇಷ. ಗರಿಕೆ, ಬಾರ‌್ಲಿ ಮುಂತಾದ ಹುಲ್ಲಿನ ಹೆಂಟೆಗಳನ್ನು ಮಣ್ಣು ಸಹಿತ ತಂದು ಕಟ್ಟೆಗೆ ಅಂಟಿಸಲಾಗುತ್ತಿದೆ.ಮಳೆಗಾಗಿ ಕಾಯದೆ ಟ್ಯಾಂಕರ್ ಮೂಲಕ ನೀರು ಹಾಕಿ ಹುಲ್ಲು ಒಣಗಿ ಹೋಗದಂತೆ ಎಚ್ಚರ ವಹಿಸಲಾಗಿದೆ. ಅದು ಬೇರುಬಿಟ್ಟುಕೊಂಡರೆ ಕಟ್ಟೆ ಸವಕಳಿ ನಿಲ್ಲುವುದರ ಜೊತೆಗೆ ಜಾನುವಾರಿಗೆ ಹಸಿರು ಮೇವು ದೊರೆಯುತ್ತದೆ.ಕಟ್ಟೆಗೆ ಕಲ್ಲು ಹಾಸುವುದು ವೆಚ್ಚದಾಯಕ. ಆದರೆ ಹುಲ್ಲು ಬೆಳೆಸುವ ವಿಧಾನ ಪರಿಸರ ಸ್ನೇಹಿ ಹಾಗೂ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ನಾರಮಾಕಲಪಲ್ಲಿ ಗ್ರಾಮದ ರೈತ ವೆಂಕಟರಾಮರೆಡ್ಡಿ.ಕಟ್ಟೆಯ ಮೇಲೆ ಹುಲ್ಲು ಬೆಳೆಸುವ ವಿಧಾನ ಹೊಸದೇನೂ ಅಲ್ಲ. ನಮ್ಮ ಪೂರ್ವಿಕರು ಬಹಳ ಹಿಂದೆಯೇ ಈ ಕ್ರಮ ಅನುಸರಿಸುತ್ತಿದ್ದರು. ಕಟ್ಟೆಯ ಮೇಲೆ ಹುಲ್ಲು ಬೆಳೆಸಿ, ನೀರುಗಂಟಿ ಉಸ್ತುವಾರಿಗೆ ಬಿಡುತ್ತಿದ್ದರು. ಗದ್ದೆ ಬಯಲಲ್ಲಿ ಭತ್ತದ ಸುಗ್ಗಿ ಮುಗಿಯುವ ವರೆಗೆ ಕಟ್ಟೆಯ ಮೇಲೆ ದನಕರುಗಳಿಗೆ ಪ್ರವೇಶ ಇರುತ್ತಿರಲಿಲ್ಲ.ಕೊಯಿಲು ಮುಗಿದ ಮೇಲೆ ಗ್ರಾಮದ ಎಲ್ಲ ಜಾನುವಾರುಗಳನ್ನು ಮೇಯಲು ಬಿಡುತ್ತಿದ್ದರು. ಕೆಲವು ಗ್ರಾಮಗಳ ಹಿರಿಯರು ಕೆರೆ ಕಟ್ಟೆಯ ಮೇಲಿನ ಹುಲ್ಲನ್ನು ಗ್ರಾಮದ ರೈತರಿಗೆ ಹರಾಜು ಹಾಕುತ್ತಿದ್ದರು. ಹರಾಜಿನಿಂದ ಬಂದ ಬಂದ ಹಣವನ್ನು ಗದ್ದೆ ಬಯಲಿನ ಕಾಲುವೆಗಳ ಅಭಿವೃದ್ಧಿಗೆ ಬಳಸುತ್ತಿದ್ದರು. ಈಗ ಹರಾಜು ಪದ್ಧತಿ ಇಲ್ಲವಾದರೂ, ಕಟ್ಟೆ ಮೇಲಿನ ಹುಲ್ಲು ಗ್ರಾಮದ ಜಾನುವಾರುಗಳ ಹೊಟ್ಟೆಗೆ ಆಹಾರವಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.