ಕೆರೆ ಭರ್ತಿಗೆ ಮೊದಲ ಆದ್ಯತೆ: ಪುಟ್ಟರಾಜು

ಮಂಡ್ಯ: ಮುಂಗಾರಿನ ಹಂಗಾಮು ನಂತರ ಕೆರೆಗಳ ಭರ್ತಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸದ ಸಿ.ಎಸ್್. ಪುಟ್ಟರಾಜು ಹೇಳಿದರು.
ಜಿಲ್ಲೆಯ ಕೆಆರ್ಎಸ್ನಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಗಳನ್ನು ಭರ್ತಿ ಮಾಡುವುದರಿಂದ ಅಂತರ್ಜಲ ಹೆಚ್ಚಾಗಲಿದೆ. ಜತೆಗೆ ರೈತರು ಹಾಗೂ ಜಾನುವಾರುಗಳಿಗೂ ಅನುಕೂಲವಾಗಲಿದೆ ಎಂದರು.
ನಾಲೆಗಳ ಕೊನೆಯ ಭಾಗಕ್ಕೆ ಹಾಗೂ ಕೆರೆಗಳಿಗೆ ನೀರು ಭರ್ತಿಯಲ್ಲಿ ಆಗಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಸಭೆ ನಡೆಸಿದ್ದೇನೆ. ಇನ್ನೆರಡು ದಿನಗಳ ಕಾಲ ವಿ.ಸಿ. ನಾಲೆಗೆ ನೀರು ಹರಿಸುವ ಮೂಲಕ ಮಳವಳ್ಳಿ ತಾಲ್ಲೂಕಿನ ಹೆಬ್ಬಕವಾಡಿ ಶಾಖೆಗೆ ನೀರು ಕೊಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಪ್ರತಿ ಕೆರೆಗಳಿಗೂ ನಾಲೆಗಳಿಂದ ಸಂಪರ್ಕ ಕಲ್ಪಿಸುವ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು. ಅದಕ್ಕೆ ನೀಲನಕ್ಷೆಯೊಂದನ್ನು ರೂಪಿಸಿ ಜಾರಿಗೊಳಿಸಲಾಗುವುದು. ಹೇಮಾವತಿ ನೀರೂ ಕಡೆಯ ಭಾಗಕ್ಕೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನಾಲೆಗಳ ಆಧುನೀಕರಣ, ನಾಲೆಗಳಿಗೆ ನೀರು ಬಿಡುವುದು ಮುಂತಾದ ವಿಷಯಗಳ ಕುರಿತು ಚರ್ಚಿಸಲು ಜೂನ್ 7ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಾವೇರಿ ಸಲಹಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಿಲ್ಲೆಯ ಶಾಸಕರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಹುಲಿಕೆರೆ ಟನಲ್ ದುರಸ್ತಿಗೆ 9.5 ಕೋಟಿ ರೂಪಾಯಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆಯೂ ಆರಂಭವಾಗಿದೆ. ಕಾಮಗಾರಿ ಯಾವಾಗ ಆರಂಭಿಸಬೇಕು ಎನ್ನುವುದನ್ನು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು. ನಾಲೆಗಳ ಆಧುನೀಕರಣದ ಕೆಲಸ ಶೇ 30 ರಷ್ಟು ಆಗಿದೆ. ನೀರು ನಿಲ್ಲಿಸದ ಕೂಡಲೇ ಕಾಮಗಾರಿಯನ್ನು ತೀವ್ರಗತಿಯಲ್ಲಿ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ. ಈ ಬಗ್ಗೆ ಐಸಿಸಿ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಮೂವರು ಸಂಸದರು ಕೇಂದ್ರದಲ್ಲಿ ಮಂತ್ರಿಯಾಗಿರುವುದು ಜಿಲ್ಲೆಗೆ ಅನುಕೂಲವಾಗಲಿದೆ. ಅವರ ಮೂಲಕ ಜಿಲ್ಲೆಗೆ ವಿಶೇಷ ಅನುದಾನ, ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲಿದ್ದೇನೆ. ಅದಕ್ಕಾಗಿ ಕೆಲವೊಂದು ಯೋಜನೆಗಳನ್ನು ಸಿದ್ಧ ಪಡಿಸಿಕೊಳ್ಳುತ್ತಿದ್ದೇನೆ ಎಂದರು.
ಕೇಂದ್ರೀಯ ವಿದ್ಯಾಲಯ ಮಂಜೂರಾತಿ ಬಗ್ಗೆ ಗೊಂದಲಗಳಿವೆ. ಕೇಂದ್ರ ಸಂಪುಟದ ಅನುಮೋದನೆಯಾಗಿಲ್ಲ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಆರಂಭಿಸಲು ಅನುಮತಿ ಸಿಗುವುದೇ ನೋಡಬೇಕು. ಶೀಘ್ರ ವಿದ್ಯಾಲಯ ಆರಂಭಿಸಲು ಪ್ರಯತ್ನವನ್ನು ಮುಂದುವರಿಸುತ್ತೇನೆ ಎಂದರು.
ಜಿ.ಪಂ. ಸಿಇಒ ಆಗಿರುವ ಪ್ರಭಾರ ಜಿಲ್ಲಾಧಿಕಾರಿ ಪಿ.ಸಿ. ಜಯಣ್ಣ, ಉಪವಿಭಾಗಾಧಿಕಾರಿ ವಾಣಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಪಿ.ಶಿವಶಂಕರ್, ಸೂಪರಿಂಟೆಂಡೆಂಟ್್ ಎಂಜಿನಿಯರ್ ಶಂಕರೇಗೌಡ, ಕಾರ್ಯಪಾಲಕ ಎಂಜಿನಿಯರರಾದ ಕೆ. ಬಸರಾಜೇಗೌಡ, ಶ್ರೀರಂಗರಾಜು, ಪಿ. ವಿನೋದ್ಕುಮಾರ್್, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.