ಸೋಮವಾರ, ಜೂನ್ 14, 2021
22 °C

ಕೆರ್ಜಾಡಿ: ರಬ್ಬರ್ ತೋಟಕ್ಕೆ ಬೆಂಕಿ, ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಕೆರ್ಜಾಡಿ ರಬ್ಬರ್ ತೋಟಕ್ಕೆ ಸೋಮವಾರ ಸಂಜೆ ಬೆಂಕಿ ಬಿದ್ದಿದ್ದು ಗ್ರಾಮಸ್ಥರು ಮತ್ತು ಅಗ್ನಿ ಶಾಮಕ ದಳದ ನೆರವಿನಿಂದ ಬೆಂಕಿ ಆರಿಸಲಾಗಿದೆ.ಕೇರಳ ಮೂಲದ ಕೆರ್ಜಾಡಿ ರೋಯಿ ಎಂಬವರ ರಬ್ಬರ್ ತೋಟದಲ್ಲಿ ಸೋಮವಾರ ಸಂಜೆ 4ರ ಸುಮಾರಿಗೆ ವಿದ್ಯುತ್ ತಂತಿಗಳು ಗಾಳಿಗೆ ಅಲುಗಾಡಿ ಶಾರ್ಟ್ ಸರ್ಕ್ಯುಟ್ ಉಂಟಾಗಿ ಬೆಂಕಿ ತಗುಲಿದೆ. ಬೆಂಕಿ ಕಿಡಿ ರಬ್ಬರ್ ತೋಟದಲ್ಲಿ ಒಣಗಿರುವ ಹುಲ್ಲುಗಳ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿದೆ.ಅಗ್ನಿ ಆಕಸ್ಮಿತ ಸಮಯಯದಲ್ಲಿ ತೋಟದಲ್ಲಿ  ಕಾರ್ಮಿಕರು ಮಾತ್ರ ಇದ್ದರು. ಸ್ಥಳಿಯ ನಿವಾಸಿಗಳು  ತೋಟದಲ್ಲಿ ಬೆಂಕಿಯನ್ನು ನೋಡಿದ ತಕ್ಷಣ ಅಗ್ನಿಶಾಮಕ ದಳಕ್ಕೆ ಮತ್ತು ಹೆಬ್ರಿ ಸಮೀಪದ ಮುದ್ರಾಡಿಯ ಮಾಲೀಕರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳೀಯರು ಮತ್ತು ಶಾಲೆ ವಿದ್ಯಾರ್ಥಿಗಳು ಸೇರಿ ನಂದಿಸಲು ಯತ್ನಿಸಿದರು.ಬಳಿಕ ಕುಂದಾಪುರದಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಸುಮಾರು 200 ರಬ್ಬರ್ ಗಿಡಗಳು ನಾಶವಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಬೆಳ್ವೆ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ್ ನಾಯ್ಕ ಭೇಟಿ ನೀಡಿದರು.ರಬ್ಬರ್, ತೆಂಗು, ಅಡಿಕೆ ತೋಟದ ಮೂಲಕ ಹಾದು ಹೋಗುವ ವಿದ್ಯುತ್ ಮಾರ್ಗದಲ್ಲಿ ಬೆಂಕಿ ಅನಾಹುತವಾಗುವ ಸಂಭವವಿದ್ದು ಮುಂಜಾಗ್ರತೆ ವಹಿಸಬೇಕು ಎಂದು ಅವರು ವಿನಂತಿಸಿದರು.ಮಡಾಮಕ್ಕಿ ಗ್ರಾಮ ಸಭೆ ನಾಳೆ


ಸಿದ್ದಾಪುರ: ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಶೇಡಿಮನೆ ಮತ್ತು ಮಡಾಮಕ್ಕಿ ಕಂದಾಯ ಗ್ರಾಮಗಳ ಗ್ರಾಮ ಸಭೆ ಇದೇ 28ರಂದು ಮಡಾಮಕ್ಕಿ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಗ್ರಾ.ಪಂ. ಪ್ರಭಾರ ಅಧ್ಯಕ್ಷೆ ಬೆಪ್ಡೆ ರತಿ ಶೆಡ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.