ಕೆರ್ರಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ?

7

ಕೆರ್ರಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ?

Published:
Updated:
ಕೆರ್ರಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ?

ವಾಷಿಂಗ್ಟನ್ (ಪಿಟಿಐ): ಅಮೆರಿಕ ಸೆನೆಟ್‌ನ ವಿದೇಶಾಂಗ ವ್ಯವಹಾರ ಸಮಿತಿ ಅಧ್ಯಕ್ಷರಾದ 69 ವರ್ಷದ ಜಾನ್ ಕೆರ್ರಿ ಅವರನ್ನು ಬಹು ಮಹತ್ವದ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಅಧ್ಯಕ್ಷ ಬರಾಕ್ ಒಬಾಮ ನಾಮಕರಣ ಮಾಡುವ ಸಾಧ್ಯತೆಯಿದೆ.ಈ ಹಿಂದೆ ಹಲವು ಬಾರಿ ಒಬಾಮ ಆಡಳಿತ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಜಾನ್ ಕೆರ‌್ರಿ ಆಪದ್ಬಾಂಧವನ ರೀತಿ ನಡೆದುಕೊಂಡಿದ್ದಾರೆ. ಅವರು ಪಾಕಿಸ್ತಾನದ ಜತೆ ಅಮೆರಿಕ ಸಂಬಂಧ ಹದಗೆಟ್ಟಾಗಲೆಲ್ಲ ಆ ದೇಶಕ್ಕೆ ತೆರಳಿ ಸಂಬಂಧ ಸುಧಾರಣೆಗೆ ಒತ್ತು ನೀಡಿದ್ದಾರೆ.  ಮೆಸಾಚುಸೆಟ್ಸ್ ಸೆನೆಟ್ ಸದಸ್ಯರಾಗಿರುವ ಜಾನ್ ಕೆರ್ರಿ ಅವರ ಹೆಸರನ್ನು ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಮುಂದಿನ ವಾರ ಪ್ರಕಟಿಸುವ ಸಂಭವವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry