ಸೋಮವಾರ, ಮೇ 17, 2021
29 °C

ಕೆಲಗೆರೆ: ಕನಿಷ್ಠ ಅಭಿವೃದ್ಧಿಯಿಂದಲೂ ಕೆಳಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ಈ ಗ್ರಾಮಕ್ಕೆ ಅಭಿವೃದ್ಧಿ ಅಪರೂಪದ ಸಂಗತಿ. 150ಕ್ಕೂ ಹೆಚ್ಚು ಕುಟುಂಬಗಳು, 750ಕ್ಕೂ ಹೆಚ್ಚು ಜನಸಂಖ್ಯೆ ಇರುವ ತಾಲ್ಲೂಕಿನ ಕೆಲಗೆರೆ, ಅಭಿವೃದ್ಧಿ ದೃಷ್ಟಿಯಿಂದ ಕೆಳಗೇ ಇದೆ. 750 ಕ್ಕು ಹೆಚ್ಚು ಜನಸಂಖ್ಯೆ ಹೊಂದಿದೆ.ವಿಶೇಷ ಘಟಕ ಯೋಜನೆ ಎಂಬ ಹೆಸರು ಕೇಳಿಬಂದರೂ ಯಾವುದೇ ಕಾಮಗಾರಿ ನಡೆದಿಲ್ಲ. ಇಲ್ಲಿನ ರಸ್ತೆಗಳು ಇನ್ನೂ ಟಾರು ಕಂಡಿಲ್ಲ ಎಂಬುದು ಅಭಿವೃದ್ಧಿ ದೃಷ್ಟಿಯಿಂದ ಎಷ್ಟು ಹಿಂದುಳಿದಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.ಗ್ರಾಮದಲ್ಲಿ ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಒಳಚರಂಡಿ ನಿರ್ವಹಣೆ ಮತ್ತು ಕುಡಿಯುವ ನೀರಿನದು. ಯೋಜನಾಬದ್ಧವಾಗಿ ಚರಂಡಿಗಳು ನಿರ್ಮಾಣವಾಗದೆ, ಗ್ರಾಮದ ಹಲವು ಕಡೆ ಚರಂಡಿಗಳೆ ಇಲ್ಲದೆ ಮಳೆಗಾಲದಲ್ಲಿ ಕೊಳಚೆ ನೀರು ಮನೆಯ ಒಳಗೆ ಪ್ರವೇಶಿಸುವ ಸ್ಥಿತಿ ಇದೆ.ಈ ಬಗೆಗೆ ಅನೇಕ ಬಾರಿ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೂ, ಫಲಿತಾಂಶ ಶೂನ್ಯ. ಉತ್ತಮ ವಾತಾವರಣದಿಂದ ಕೂಡಿದ ಶಾಲೆ ಇದೆ, ಆದರೆ ಅರ್ಧ ಭಾಗದಷ್ಟು ಮಾತ್ರ ಕಾಂಪೌಂಡ್ ವ್ಯವಸ್ಥೆ ಕಲ್ಪಿಸಲಾಗಿದೆ.ಇರುವ ಅಂಗನವಾಡಿ ಕೇಂದ್ರಕ್ಕೆ 20ಕ್ಕೂ ಹೆಚ್ಚು ಮಕ್ಕಳು ಬರುತ್ತಾರೆ. ಆದರೆ ಈ ಅಂಗನವಾಡಿಗೆ ಸೇರಿದಂತೆ ಜಾಗವಿದ್ದರೂ ಇಲ್ಲೊಂದು ಶೌಚಾಲಯವಿಲ್ಲ. ಶೌಚಾಲಯ ನಿರ್ಮಾಣಕ್ಕೆ ಅಂಗನವಾಡಿ ಶಿಕ್ಷಕಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು ಪಂಚಾಯಿತಿ ಮಾತ್ರ ಮೌನ ವ್ರತ ತಳೆದಿದೆ.ಎರಡು ಕಿ.ಮೀ ಅಂತರದಲ್ಲಿ ದೊಡ್ಡೇಗೌಡನ ಕೊಪ್ಪಲು ಗ್ರಾಮವಿದೆ. ಎರಡು ಗ್ರಾಮಗಳ ಜನಸಂಖ್ಯೆಯನ್ನು ಸೇರಿಸಿ ಸುವರ್ಣ ಗ್ರಾಮ ಯೋಜನೆ ಅನುಕೂಲ ಕಲ್ಪಿಸಲಿ ಎಂಬುದು ಗ್ರಾಮಸ್ಥರ ವಾದ. ಇನ್ನಾದರೂ ಜನಪ್ರತಿನಿಧಿಗಳು ಗ್ರಾಮಕ್ಕೆ ಅಗತ್ಯವಿರುವ ಸೌಲಭ್ಯ ಪೂರೈಸುವತ್ತ ಶೀಘ್ರ ಗಮನ ಹರಿಸಲಿ ಎಂಬುದು ಇಲ್ಲಿನ ಗ್ರಾಮಸ್ಥರ ಅಭಿಮತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.