ಸೋಮವಾರ, ಮೇ 10, 2021
20 °C

ಕೆಲವೆಡೆ ಮಳೆ; ಸಿಡಿಲಿಗೆ ಎತ್ತು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಂಡಿ ತಾಲ್ಲೂಕಿನ ಚಡಚಣ, ಬಸವನ ಬಾಗೇವಾಡಿ ತಾಲ್ಲೂಕಿನ ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿಯಲ್ಲಿ ಬುಧವಾರ ಅಕಾಲಿಕ ಮಳೆ ಸುರಿಯಿತು.ಬುಧವಾರ ಮಧ್ಯಾಹ್ನದ ನಂತರ ಭರವಸೆ ಹುಟ್ಟಿಸಿದ್ದ ಈ ಅಡ್ಡ ಮಳೆ ಜಿಲ್ಲೆಯ ಬಹುತೇಕ ಕಡೆ ಅಷ್ಟಾಗಿ ಸುರಿಯಲೇ ಇಲ್ಲ. ಎಲ್ಲೆಡೆ ಗಾಳಿ-ಮಿಂಚಿನ ಆರ್ಭಟವೇ ಜೋರಾಗಿತ್ತು. ಕೆಲವೆಡೆ ಮಾತ್ರ ತುಂತುರು ಹನಿ ಉದುರಿದವು.ಬಸವನ ಬಾಗೇವಾಡಿ ತಾಲ್ಲೂಕು ಕುದರಿ ಸಾಲವಾಡಗಿಯಲ್ಲಿ ಸಿಡಿಲು ಬಡಿದು ಒಂದು ಎತ್ತು ಮೃತಪಟ್ಟಿದ್ದು, ರೈತ ದೇವೇಂದ್ರಪ್ಪ ಬಾಲಪ್ಪ ಕಳ್ಳಿಮನಿ (ಮಾದರ) ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತಪಟ್ಟ ಎತ್ತಿನ ಮೌಲ್ಯ 40 ಸಾವಿರ ರೂಪಾಯಿ ಎಂದು ಗ್ರಾಮಸ್ಥರು ಹೇಳಿದ್ದಾರೆ.ತಿಕೋಟಾ ಹತ್ತಿರದ ಹರನಾಳ ಗ್ರಾಮದಲ್ಲಿ ಸಿಡಿಲು ಬಡಿದು ಜೋಳದ ಕಣಕಿಯ ಬಣಿವೆಗೆ ಬೆಂಕಿ ಬಿದ್ದಿತ್ತು. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಎಲ್ಲ ಕಣಕಿ ಬೆಂಕಿಗೆ ಆಹುತಿಯಾಗಿತ್ತು. ಇಂಡಿ, ಸಿಂದಗಿ ಪಟ್ಟಣದಲ್ಲಿ ಸಂಜೆ ಸ್ವಲ್ಪ ತುಂತುರು ಮಳೆಯಾಯಿತು. ವಿಜಾಪುರ ನಗರದಲ್ಲಿ ಮಧ್ಯಾಹ್ನದ ನಂತರ ಎಲ್ಲೆಡೆ ಮೋಡ ಮುಸುಕಿದ ವಾತಾವರಣವಿತ್ತು. ಬಿರುಗಾಳಿ ವಿಪರೀತವಾಗಿ ಬೀಸಲಾರಂಭಿಸಿತು. ವಿಜಾಪುರ ನಗರದಲ್ಲಿ ಇನ್ನೇನು ದೊಡ್ಡ ಮಳೆ ಸುರಿದೇ ಬಿಡುತ್ತದೆ ಎಂದು ಎಲ್ಲರೂ ಆಗಸವನ್ನು ದಿಟ್ಟಿಸುವಷ್ಟರಲ್ಲಿ ಬಿರುಗಾಳಿ ಮೋಡಗಳನ್ನು ಚದುರಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.