ಗುರುವಾರ , ಮೇ 6, 2021
23 °C

ಕೆಲಸ ತ್ಯಜಿಸಲು ಬೆನ್ನು ಹುರಿ ಸಮಸ್ಯೆ ಕಾರಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ (ಐಎಎನ್‌ಎಸ್):  ವೃತ್ತಿ ಬಗ್ಗೆ ಒಂದಲ್ಲ ಒಂದು ಕಾರಣಕ್ಕೆ ಅತೃಪ್ತಿ - ಅಸಮಾಧಾನ ಹೊಂದಿ ಕೆಲಸ ತೊರೆಯುವವರು  ಗಂಭೀರ ಸ್ವರೂಪದ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಾರೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.ಪಶ್ಚಿಮ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದಲ್ಲಿರುವ ಕೀಲು ಮತ್ತು ಮೂಳೆ ವಿಭಾಗದ ಸಂಶೋಧನಾ ಸಹ ಪ್ರಾಧ್ಯಾಪಕ ಮಾರ್ಕಸ್ ಮೆಲ್ಲೋ ನಡೆಸಿದ ಸಂಶೋಧನೆಯಿಂದ ಈ ವಿಷಯ ಬೆಳಕಿಗೆ ಬಂದಿದೆ.ಸಂಶೋಧನೆ ಪ್ರಕಾರ, ಅನೇಕ ಉದ್ಯೋಗಿಗಳು ನಿರ್ದಿಷ್ಟ ಕಾರಣಗಳಿಲ್ಲದೇ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ವೃತ್ತಿ ಹಾಗೂ ಸಾಮಾಜಿಕ ಸಂಬಂಧಗಳ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ.ಬೆನ್ನು ನೋವಿನ ಹೆಸರಿನಲ್ಲಿ ಕೆಲಸಕ್ಕೆ ರಜೆ ಹಾಕಿ, ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೌಕರರ ಪೈಕಿ  ಬೆರಳೆಣಿಕೆ ಮಂದಿಗೆ ಮಾತ್ರ  ಸ್ಲಿಪ್‌ಡಿಸ್ಕ್‌ನಂತಹ ಸಮಸ್ಯೆ ಇರುತ್ತದೆ. ಉಳಿದವರಲ್ಲಿ ಬೆನ್ನು ಹುರಿ ನೋವಿಗೆ ಯಾವುದೇ ನಿರ್ದಿಷ್ಟ ಕಾರಣಗಳು ಇರದಿರುವುದು  ಬೆಳಕಿಗೆ ಬಂದಿದೆ.ಅಧ್ಯಯನದಲ್ಲಿ ಬೆನ್ನು ಹುರಿ ಬಾಧೆ ಇರುವ 315 ಉದ್ಯೋಗಿಗಳನ್ನು  3 ವಾರಗಳಿಂದ 6 ತಿಂಗಳವರೆಗೂ ಸಂದರ್ಶಿಸಲಾಗಿದೆ.ಅಧ್ಯಯನದ ವರದಿ ವಿಶ್ಲೇಷಿಸಿರುವ ಮೆಲ್ಲೋ, `ಒಂದು ಬಾರಿ ನೌಕರರು ಅನಾರೋಗ್ಯ ನಿಮಿತ್ತ ರಜೆ ಹಾಕಿ ಮನೆಯಲ್ಲಿ ಉಳಿದರೆ, ಮತ್ತೆ ಕಚೇರಿಗೆ ಹೋಗಲು ಅವರಿಗೆ ಮನಸ್ಸಾಗುವುದಿಲ್ಲ. ಆಗ ಬೆನ್ನು ಹುರಿಯಂತಹ ನೋವು ಹೆಚ್ಚಾಗುತ್ತದೆ. ರಜೆ ಹಾಕಿ ಮನೆಯಲ್ಲಿ ಇರುವಂತಹ ದುರಭ್ಯಾಸ  ತಪ್ಪಿಸುವುದು ಉತ್ತಮ~ ಎಂದೂ ಅವರು ಸಲಹೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.