ಶುಕ್ರವಾರ, ಜೂನ್ 18, 2021
27 °C
ಗುಲ್ಬರ್ಗ ಲೋಕಸಭಾ ಮೀಸಲು ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಉಮೇದುವಾರಿಕೆ

ಕೆಲಸ ನೋಡಿ ‘ಕೈ’ಹಿಡಿವ ಜನತೆ: ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ಐದು ವರ್ಷಗಳ ಕಾಲ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕಣ್ಣಿಗೆ ಕಾಣಿಸುತ್ತವೆ. ಹೀಗಾಗಿ, ಮತದಾರರು ಈ ಬಾರಿಯೂ ಆಶೀರ್ವದಿಸಲಿದ್ದು, ನನ್ನ ಗೆಲುವು ಖಚಿತ. ಹಾಗಂತ ಮನೆಯಲ್ಲಿ ಕೂರಲ್ಲ’..–ಇವು ಗುಲ್ಬರ್ಗ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಮನದಾಳದ ಮಾತುಗಳು.

ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರಿಗೆ ಗುರುವಾರ ಮಿನಿವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದ ಜನರು ಹಾಗೂ ಮತದಾರರ ಆಶೀರ್ವಾದದಿಂದ ನಾಮಪತ್ರ ಸಲ್ಲಿಸಿದ್ದೇನೆ. ನಾನು ಕೈಗೊಂಡಿರುವ ಕೆಲಸಗಳ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ ದ್ದಾರೆ. ಹಾಗಂತ ಅತಿಯಾದ ವಿಶ್ವಾಸ ಇಟ್ಟುಕೊ ಳ್ಳುವುದು ಸರಿಯಲ್ಲ. ಗೆಲುವು ಖಚಿತ ಎಂದು ಮನೆಯಲ್ಲಿ ಕೂರಲು ಆಗದು. ನಮ್ಮ ಪ್ರಯತ್ನ ನಾವು ಮಾಡಲೇಬೇಕು’ ಎಂದು ಹೇಳಿದರು.‘ಊಹಾ ಪೋಹಗಳು ಏನೇ ಇದ್ದರೂ ಜನಪರ ಕೆಲಸಗಳು ನನ್ನ ಕೈಹಿಡಿಯಲಿವೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಜನರು ಪ್ರೋತ್ಸಾಹ ನೀಡುತ್ತಾರೆ ಎಂದು ನಂಬಿದ್ದೇನೆ’  ಎಂದು ಅವರು ಹೇಳಿದರು.

‘ಹೋದ ವರ್ಷ ಇಷ್ಟೊಂದು ಉತ್ಸಾಹ ಇರಲಿಲ್ಲ. ಈ ಬಾರಿ ಮತದಾರರು ಹಾಗೂ ಕಾರ್ಯಕರ್ತರ ಉತ್ಸಾಹ ಜೋರಾಗಿದೆ. ಹೀಗಾಗಿ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಜವಳಿ ಸಚಿವ ಬಾಬುರಾವ್ ಚಿಂಚನ ಸೂರ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಮಾಲೀಕಯ್ಯ ಗುತ್ತೇದಾರ ಅವರು ಸೂಚಕರಾಗಿ ಖರ್ಗೆ ನಾಮಪತ್ರಕ್ಕೆ ಸಹಿ ಹಾಕಿದರು. ಖರ್ಗೆ ಅವರು ಒಂದೇ ಹೆಸರಿನ ನಾಲ್ಕು ನಾಮಪತ್ರ ಗಳನ್ನು ಸಲ್ಲಿಸಿದರು.ಅದ್ದೂರಿ ಮೆರವಣಿಗೆ

ನಗರದ ಜಗತ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಖರ್ಗೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದರು. ಎಲ್ಲರ ಕೈಯಲ್ಲೂ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದವು. ಲಾಹೋಟಿ ಪೆಟ್ರೋಲ್ ಬಂಕ್, ಜಗತ್ ವೃತ್ತ ಸೇರಿದಂತೆ ಹಲವೆಡೆ ಕಾರ್ಯಕರ್ತರ ನೂರಾರು ವಾಹನ ಗಳನು ನಿಂತಿರುವುದು ಕಂಡುಬಂದಿತು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಖರ್ಗೆ ಅವರು ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆಯೇ ‘ಕಾಂಗ್ರೆಸ್‌ಗೆ ಜಯವಾಗಲಿ..’, ‘ಖರ್ಗೆ ಅವರಿಗೆ ಜಯವಾಗಲಿ..’ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.*‘ಬಿಜೆಪಿಗೆ ಕಣ್ಣು, ಕಿವಿ ಇಲ್ಲ’

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.