ಕೆಲಸ ಮಾಡದ ಅಧಿಕಾರಿಗಳಿಗೇಕೆ ಪಗಾರ:ಹೈಕೋರ್ಟ್‌ ಪ್ರಶ್ನೆ

7

ಕೆಲಸ ಮಾಡದ ಅಧಿಕಾರಿಗಳಿಗೇಕೆ ಪಗಾರ:ಹೈಕೋರ್ಟ್‌ ಪ್ರಶ್ನೆ

Published:
Updated:

ಬೆಂಗಳೂರು: ನಿಗದಿತ ಕಾರ್ಯಕ್ಕಾಗಿ ನೇಮಿಸಲಾದ ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸದಿದ್ದಲ್ಲಿ ಅವರ ವೇತನವನ್ನು ತಡೆ ಹಿಡಿಯಲು ರಾಜ್ಯ ಸರ್ಕಾರ ಏಕೆ ಕ್ರಮ ಕೈಗೊಳ್ಳ­ಬಾರದು ಎಂದು ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ.ಗುಲ್ಬರ್ಗ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಶರಣ ದೇಸಾಯಿ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ­ಮೂರ್ತಿ ಡಿ.ಎಚ್‌.ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅಧಿಕಾರಿಗಳು ಕೆಲಸ ಮಾಡ­ದಿದ್ದಲ್ಲಿ ಅವರ ವೇತನವನ್ನು ತಡೆ ಹಿಡಿಯಲು ಏಕೆ ಆದೇಶಿಸಬಾರದು ಎಂದು ಮೌಖಿಕವಾಗಿ ಪ್ರಶ್ನಿಸಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಆಯುಕ್ತ ಹುದ್ದೆಗೆ ಮೇಲ್ಪಟ್ಟ ಎಲ್ಲ ಅಧಿಕಾರಿಗಳು ಇದೇ 17ರಂದು ವಿಚಾ­ರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry